(ನ್ಯೂಸ್ ಕಡಬ) newskadaba.com ಮಂಗಳೂರು, ಎ.19. ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ತಡೆಹಿಡಿದ ಬೆಳ್ಳಾರೆ ಠಾಣಾ ಪೊಲೀಸ್ ಸಿಬ್ಬಂದಿಯೋರ್ವರು ದಂಡ ವಿಧಿಸಿದ್ದಲ್ಲದೆ ಊರ ಕೋಳಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಮಾಧ್ಯಮವೊಂದರಲ್ಲಿ ಬಂದ ವರದಿಯು ಸುಳ್ಳು ಸುದ್ದಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
‘ಬಡವರನ್ನು ದೋಚುತ್ತಿರುವ ಬೆಳ್ಳಾರೆ ಪೊಲೀಸರು, ಆಸ್ಪತ್ರೆಗೆ ಹೋಗ್ಬೇಕಾದ್ರೂ ಈ ಪೊಲೀಸಪ್ಪನಿಗೆ 1000 ಸಾವಿರ ಕೊಟ್ಟು ಊರ ಕೋಳಿ ಕೊಡ್ಬೇಕಂತೆ’ ಎಂಬ ತಲೆಬರಹದಡಿ ಮಾಧ್ಯಮವೊಂದರಲ್ಲಿ ಬೆಳ್ಳಾರೆ ಠಾಣೆ ಪೋಲೀಸ್ ಸಿಬ್ಬಂದಿಯ ಕುರಿತು ಮಾಧ್ಯಮದಲ್ಲಿ ಬಂದಿದ್ದ ವರದಿಯ ಬಗ್ಗೆ ತನಿಖೆಗೆ ಆದೇಶಿಸಿದ್ದು, ಯಾರೋ ಕಿಡಿಗೇಡಿಗಳು ವಿಡಿಯೋದಲ್ಲಿ ಆರೋಪಿಸಿರುವ ವ್ಯಕ್ತಿಗಳನ್ನು ಬಳಸಿಕೊಂಡು ಪೋಲೀಸರ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಸಾರ್ವಜನಿಕವಾಗಿ ಪೋಲೀಸರ ಮಾನಹಾನಿ ಮಾಡುವ ಕೃತ್ಯಕ್ಕೆ ಕೈಹಾಕಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.