ಕಡಬ ಠಾಣಾ ಎಎಸ್ಐ ಸುರೇಶ್ ರಿಂದ ಬಡ ಕುಟುಂಬಕ್ಕೆ ಸಹಾಯ

(ನ್ಯೂಸ್ ಕಡಬ) newskadaba.com ಕಡಬ, ಎ.18. ಬಡ ಕುಟುಂಬವೊಂದಕ್ಕೆ ಅಕ್ಕಿ ಹಾಗೂ ದಿನಬಳಕೆಯ ವಸ್ತುಗಳನ್ನು ಸ್ವತಃ ಖರೀದಿಸಿ ತಲುಪಿಸಿ ಕಡಬ ಠಾಣಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಠಾಣಾ ವ್ಯಾಪ್ತಿಯ ಕುಂತೂರು ಸಮೀಪದ ಬೇಳ್ಪಾಡಿ ಎಂಬಲ್ಲಿನ ಮುಸ್ಲಿಂ ಕುಟುಂಬವೊಂದು ಬಡತನದಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದ ಕಡಬ ಠಾಣಾ ಎಎಸ್ಐ ಸುರೇಶ್ ಸಿ.ಟಿ., ಹೋಂಗಾರ್ಡ್ ಯೋಗೀಶ್ ಹಾಗೂ ಲೋಕೇಶ್ ರವರ ಜೊತೆ‌ ತೆರಳಿ ದಿನಬಳಕೆಯ ಸಾಮಾಗ್ರಿಗಳನ್ನು ವಿತರಿಸಿದರು. ಕಳೆದ ವಾರವಷ್ಟೇ ಕಡಬ ಠಾಣೆಯ ಮಹಿಳಾ ಸಿಬ್ಬಂದಿಗಳು ದಿನಬಳಕೆಯ ಸಾಮಾಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿಸಿ ಕೊಟ್ಟು ಮಾನವೀಯತೆ ಮೆರೆದಿದ್ದರು.

Also Read  How to Select the Best Virtual Data Room Software

error: Content is protected !!
Scroll to Top