ರಾಜ್ಯದಲ್ಲಿ ಶನಿವಾರ ಒಂದೇ ದಿನ 25 ಮಂದಿಗೆ ಕೊರೋನ ಸೋಂಕು ದೃಢ

ಬೆಂಗಳೂರು, ಎ.18: ರಾಜ್ಯದಲ್ಲಿ ಶನಿವಾರ ಒಂದೇ ದಿನ 25 ಕೊರೋನ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ.


ರಾಜ್ಯ ಸರಕಾರ ಸಂಜೆ ಬಿಡುಗಡೆ ಮಾಡಿರುವ ಆರೋಗ್ಯ ಬುಲೆಟಿನ್‌ನಲ್ಲಿ ಇಂದು 25 ಸೋಂಕು ಪ್ರಕರಣಗಳು ದೃಢಪಟ್ಟಿರುವುದಾಗಿ ಗೊತ್ತಾಗಿದೆ. ಮೈಸೂರಿನಲ್ಲಿ 7, ಬಾಗಲಕೋಟೆಯಲ್ಲಿ 7, ಬೆಂಗಳೂರಿನಲ್ಲಿ 3, ಕಲಬುರಗಿಯಲ್ಲಿ 2, ವಿಜಯಪುರದಲ್ಲಿ 2, ಹುಬ್ಬಳ್ಳಿ, ಧಾರವಾಡದಲ್ಲಿ 1, ಬೆಳಗಾವಿಯಲ್ಲಿ 1, ಮಂಡ್ಯದಲ್ಲಿ 1, ಗದಗದಲ್ಲಿ 1 ಪ್ರಕರಣ ವರದಿಯಾಗಿವೆ. ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿದ್ದ ಆರೋಗ್ಯ ಬುಲೆಟಿನ್‌ನಲ್ಲಿ 12 ಕೋವಿಡ್ ಪ್ರಕರಣಗಳಷ್ಟೇ ದೃಢವಾಗಿದ್ದವು. ಸಂಜೆ ಹೊತ್ತಿಗೆ ಆ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

Also Read  ಡಾ.ಎಸ್.‌ಆರ್ ನಾಗೇಂದ್ರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶಿಸಿ, ೫೦ ಲಕ್ಷ ರೂ.ಪರಿಹಾರ ಘೋಷಿಸಿದ ಸಿಎಂ‌

error: Content is protected !!
Scroll to Top