ಎಸ್‌ಡಿಪಿಐ ರಾ.ಕಾರ್ಯದರ್ಶಿ ಅಲ್ಫೋನ್ಸ್ ಪುತ್ರ ಆಕಾಶ್ ಫ್ರಾಂಕೋ ನಿಧನ

ಮಂಗಳೂರು, ಎ.18: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಉಪನ್ಯಾಸಕ, ಕುವೆಟ್ಟು ಶಾಲೆ ಬಳಿ ನಿವಾಸಿ ಅವೀನ್ ಆಕಾಶ್ ಫ್ರಾಂಕೋ (26)ಹೃದಯಘಾತದಿಂದ ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು

ಇವರು ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಮಾಲಕ ಮತ್ತು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮತ್ತು ಎಲಿಜಾ ಫ್ರಾಂಕೋ ದಂಪತಿಯ ಪುತ್ರ. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದ ಅವೀನ್ ಸ್ನೇಹಜೀವಿಯಾಗಿದ್ದರು. ಬಾಲ್ಯದಿಂದಲೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ➤ 2020ರ ಕುರಿತು ಸ್ಪಷ್ಠೀಕರಣಗಳು

ಮೃತರು ಸಹೋದರಿ ಮತ್ತು ಕುಟುಂಬಸ್ಥರನ್ನು ಮತ್ತು ಅಪಾರ ವಿದ್ಯಾರ್ಥಿ ಬಳಗವನ್ನು ಅಗಲಿದ್ದಾರೆ.

ಎಸ್‌ಡಿಪಿಐ ಸಂತಾಪ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಅವರ ಪುತ್ರ ಅವೀನ್ ಆಕಾಶ್ ಫ್ರಾಂಕೋರ ನಿಧನಕ್ಕೆ ಎಸ್‌ಡಿಪಿಐ ತೀವ್ರ ಸಂತಾಪ ವ್ಯಕ್ತಪಡಿಸಿದೆ.

error: Content is protected !!
Scroll to Top