ನಮಗೂ ಕಾಲ ಬಂದೇ ಬರುತ್ತದೆ: ಡಿ.ಕೆ.ಶಿವಕುಮಾರ್ ► ತನ್ನ, ಆಪ್ತರ ನಿವಾಸಕ್ಕೆ ನಡೆದ ಐಟಿ ದಾಳಿಗೆ ಉತ್ತರ

(ನ್ಯೂಸ್ ಕಡಬ) newskadaba.com ಮೈಸೂರು, ಆ.30. ಕಾಲ ಎನ್ನುವುದು ಎಲ್ಲರಿಗೂ ಬರುತ್ತದೆ. ನಮಗೂ ಒಂದು ಕಾಲ ಇದ್ದು, ಕಾಲ ಬಂದಾಗ ನಾವು ಪ್ರತಿಅಸ್ತ್ರವನ್ನು ಉಪಯೋಗುತ್ತೇವೆ ಎಂದು ತನ್ನ ಹಾಗೂ ತನ್ನ ಆಪ್ತರ ಮನೆ ಮೇಲೆ ನಡೆದ ಐಟಿ ದಾಳಿ ಬಗ್ಗೆ ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಮೊಗ್ಗ ಹೇಳಿದ್ದಾರೆ.

ಅವರು ಮೈಸೂರಿನಲ್ಲಿರುವ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಐಟಿ ದಾಳಿ ಸಂಬಂಧ ಮಾತನಾಡಿ, ದುಃಖವಾಗಿರುವುದ ಎಂದರೆ ಕೇವಲ ನನ್ನ ನಿವಾಸಕ್ಕೆ ದಾಳಿ ನಡೆದಿದ್ದರೆ ಸಹಿಸಬಹುದಿತ್ತು. ಆದರೆ ನನ್ನ ಆಪ್ತರು, ಸಂಬಂಧಿಕರು ಸೇರಿದಂತೆ 73 ಜನರಿಗೆ ಹಗಲು ರಾತ್ರಿ ಕಷ್ಟ ಕೊಟ್ಟಿದ್ದಾರೆ. ಎಲ್ಲಾ ಕಡೆಯಿಂದ ನೀಡುತ್ತಿರುವ ಒತ್ತಡ ಕಿರುಕುಳ ನಿವಾರಿಸಿಕೊಳ್ಳಲು ಮೈಸೂರಿಗೆ ಬಂದಿದ್ದೇನೆ ಎಂದರು.

Also Read  ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ 30 ಜನರು ಆತ್ಮಹತ್ಯೆ: ಆರ್.ಅಶೋಕ್

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮರುಪ್ರಶ್ನೆಯ ದಾಟಿಯಲ್ಲಿ ಉತ್ತರಿಸಿದ ಅವರು, ಐಟಿ ದಾಳಿ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆ ಸಮಂಜಸವಾಗಿದೆ. ವಿಜಯ್ ಮುಳುಗುಂದ ನಿವಾಸಕ್ಕೆ ಬುಧವಾರದಂದು ಐಟಿ ದಾಳಿ ನಡೆದ ಬಗ್ಗೆ ಮಾಧ್ಯಮದಿಂದ ತಿಳಿದಿದ್ದೇನೆ. ಮಾಧ್ಯಮದವರು ಕೂಡ ಹೆಂಡತಿ ಮಕ್ಕಳನ್ನು ಬಿಟ್ಟು ನನ್ನ ಮಾವನ ಮನೆ ಕಾದಿದ್ದೀರಿ. ನಿಮಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

error: Content is protected !!
Scroll to Top