ಬೈಕ್ ಸವಾರರಿಗೆ ಶುಭ ಸುದ್ದಿ ➤ ಎಪ್ರಿಲ್ 20 ರ ನಂತರ ಕೆಲವು ಜಿಲ್ಲೆಗಳಲ್ಲಿ ಬೈಕ್ ಸಂಚಾರಕ್ಕೆ ಅನುಮತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.18. ಲಾಕ್‌ಡೌನ್ ನಡುವೆ ಬೈಕ್ ಸವಾರರಿಗೆ ಗುಡ್ ನ್ಯೂಸ್ ಹೊರಡಿಸಿರುವ ರಾಜ್ಯ ಸರಕಾರವು ಏಪ್ರಿಲ್ 20ರಿಂದ ಬೈಕ್ ಸಂಚಾರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.

 

ಶನಿವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗ್ಗೆ ಸೂಚನೆ ನೀಡಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಏಪ್ರಿಲ್ 20 ರ ನಂತರ ಶೇ.33ರಷ್ಟು ಐಟಿ-ಬಿಟಿ ಉದ್ಯೋಗಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಕಟ್ಟಡ ಕಾಮಗಾರಿ ಆರಂಭಕ್ಕೆ ಅನುಮತಿಯನ್ನು ನೀಡಲಾಗಿದೆ. ಈ ಆದೇಶವು ಆಯಾಯ ಜಿಲ್ಲೆಯೊಳಗೆ ಸಂಚರಿಸಲು ಮಾತ್ರ ಯೋಗ್ಯವಾಗಿವೆ ಎಂದವರು ತಿಳಿಸಿದ್ದಾರೆ. ಈ ಮೂಲಕ ಲಾಕ್ ಡೌನ್ ನಡುವೆಯೂ ಬೈಕ್ ಸವಾರರಿಗೆ ಸ್ವಲ್ಪ ಮಟ್ಟಿನ ರಿಲೀಫ್ ನೀಡಲಾಗಿದೆ.

Also Read  ಬೆಳ್ತಂಗಡಿ: ನೀರಲ್ಲಿ ಮುಳುಗಿ ವ್ಯಕ್ತಿ ಮೃತ್ಯು..!!

error: Content is protected !!
Scroll to Top