Breaking news ರಾಜ್ಯದಲ್ಲಿ ಗುರುವಾರ ಒಂದೇ ದಿನ 36 ಜನರಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆ

ಬೆಂಗಳೂರು, ಎ.16: ರಾಜ್ಯದಲ್ಲಿ ಗುರುವಾರ ಮತ್ತೆ ಕೊರೋನ ಸೋಂಕಿನ ಸರಣಿ ಮುಂದುವರಿದಿದ್ದು, ಇಂದು 36 ಜನರಿಗೆ ಕೊರೋನ ವೈರಸ್ ಸೋಂಕು ತಗುಲಿದೆ. ಇದರಿಂದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 315ಕ್ಕೆ ಏರಿಕೆಯಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‌ನಿಂದಾಗಿ ತಿಳಿದು ಬಂದಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 35 ಜನರಿಗೆ ಕೊರೋನ ವೈರಸ್ ಸೋಂಕು ತಗುಲಿದೆ. ಹೀಗಾಗಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ. ಬೆಂಗಳೂರಿನ ಐವರಿಗೆ, ಬೆಳಗಾವಿಯ 17 ಜನರಿಗೆ, ಕಲಬುರಗಿಯಲ್ಲಿ ಮೂವರಿಗೆ, ಮೈಸೂರಿನ ಮೂವರಿಗೆ, ಗದಗ ಒಬ್ಬರಿಗೆ ಮತ್ತು ವಿಜಯಪುರದ ಏಳು ಜನರಿಗೆ ಕೊರೋನ ವೈರಸ್ ಸೋಂಕು ತಗುಲಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವಂತ ಹೆಲ್ತ್ ಬುಲೆಟಿನ್ ತಿಳಿಸಿದೆ.

Also Read  ಅಮೃತಸರದ ಠಾಕೂರ್‌ ದ್ವಾರ್ ದೇಗುಲದ ಎದುರು ಸ್ಫೋಟ

 

ಒಟ್ಟಾರೆಯಾಗಿ ಇಂದು ಹೊಸದಾಗಿ 35 ಜನರಿಗೆ ಕೊರೋನ ವೈರಸ್ ಸೋಂಕು ಪಾಸಿಟಿವ್ ಆಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 315ಕ್ಕೆ ಏರಿಕೆಯಾಗಿದೆ. ಇದುವರೆಗೆ ಕೊರೋನ ಸೋಂಕಿನಿಂದ 13 ಜನರು ರಾಜ್ಯದಲ್ಲಿ ಸಾವನ್ನಪ್ಪಿದ್ದರೇ, 82 ಕೊರೋನ ವೈರಸ್ ಸೋಂಕು ಪೀಡಿತರು ಗುಣಮುಖರಾಗಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

error: Content is protected !!
Scroll to Top