ಕೊರೋನಾ ಲಾಕ್‌ಡೌನ್ ಎಫೆಕ್ಟ್ ➤ ನೆಟ್ಟಣದ ಕಲಾ ಫ್ಯಾನ್ಸಿ ವತಿಯಿಂದ 33 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಎ.14. ಕೊರೋನಾ ಮಹಾಮಾರಿ ದೇಶದೆಲ್ಲೆಡೆ ವ್ಯಾಪಿಸಿರುವ ನಡುವೆಯೇ ಆರ್ಥಿಕ ಸಂಕಷ್ಟದಲ್ಲಿರುವ ಬಡ ಜನತೆಗೆ ದಿನಬಳಕೆಯ ಸಾಮಾಗ್ರಿಗಳನ್ನು ನೀಡುವ ಪರ್ವ ಆರಂಭಗೊಂಡಿದೆ.

ಅದರಂತೆ ಕಡಬ ತಾಲೂಕಿನ ನೆಟ್ಟಣ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಕಲಾ ಫ್ಯಾನ್ಸಿ ಸ್ಟೋರ್ ವತಿಯಿಂದ ನೆಟ್ಟಣ ಪರಿಸರದ ಕೊರೊನಾ ವೈರಸ್ ನ ಮಹಾಮಾರಿಯಿಂದಾಗಿ ಕಷ್ಟದಲ್ಲಿರುವ ಅತೀ ಕಡುಬಡವರಾದ 33 ಕುಟುಂಬಗಳಿಗೆ ಅಕ್ಕಿ ಮತ್ತು ಇತರ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಡಬ ಕಂದಾಯ ನಿರೀಕ್ಷಕರಾದ ಅವೀನ್ ರಂಗತ್ತಮಲೆ ಮತ್ತು ಊರಿನ ಗಣ್ಯರ ಸಮ್ಮುಖದಲ್ಲಿ ದಿನಬಳಕೆಯ ಸಾಮಗ್ರಿಗಳನ್ನು ನೀಡಲಾಗಿದ್ದು, ಈ ಮೂಲಕ ಕಷ್ಟದಲ್ಲಿರುವ ಬಡ ಕುಟುಂಬಗಳ ಕಣ್ಣೀರು ಒರೆಸುವ ಕಾರ್ಯ ಮಾಡಲಾಯಿತು.

Also Read  102 ನೆಕ್ಕಿಲಾಡಿ: ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

error: Content is protected !!
Scroll to Top