ನಾಳೆಯಿಂದ ಲಾಕ್​ಡೌನ್​ ಮತ್ತಷ್ಟು ಬಿಗಿ: ಸಿಎಂ ಯಡಿಯೂರಪ್ಪ

ಬೆಂಗಳೂರು, ಎ.14: ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರದ ಮಾರ್ಗಸೂಚಿಗಳನ್ನ ನಾವು ಪಾಲಿಸುತ್ತೇವೆ. ಇಂದಿನಿಂದ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಪ್ರಧಾನಿ ಭಾಷಣದ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಅವರು, ಮೋದಿ ಹೇಳಿದ ಸಪ್ತಸೂತ್ರಗಳನ್ನ ನಾವು ಪಾಲಿಸುತ್ತೇವೆ ಎಂದು ಹೇಳಿದ್ರು. ಎಪ್ರಿಲ್​ 20ರವರೆಗೆ ಇನ್ನಷ್ಟು ಕಟ್ಟುನಿಟ್ಟಾಗಿ ಲಾಕ್​ಡೌನ್​ ಪಾಲಿಸಲಾಗುತ್ತದೆ. ನಾಳೆ ಕೇಂದ್ರದ ಮಾರ್ಗಸೂಚಿ ಬರಲಿದ್ದು, ಅದರ ಆಧಾರದ ಮೇಲೆ ಇನ್ನೂ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಬೇಕೋ ಅದನ್ನ ತೆಗೆದುಕೊಳ್ಳುತ್ತೇವೆ ಎಂದು ಬಿಎಸ್​ವೈ ಹೇಳಿದ್ರು. ಕೃಷಿಕರಿಗೆ ತೊಂದರೆಯಾಗದಂತೆ ನಾವು ರಸಗೊಬ್ಬರ, ಬೀಜದ ವ್ಯವಸ್ಥೆ ಮಾಡಿದ್ದೇವೆ. ಪೌರಕಾರ್ಮಿಕರು ಪೊಲೀಸರಿಗೆ ಗೌರವ ಕೊಡುವಂತೆ ಮೋದಿ ಹೇಳಿದ್ದಾರೆ.

Also Read     ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

ವಲಸೆ ಕಾರ್ಮಿಕರು ಎಲ್ಲಿದ್ದಾರೋ ಅಲ್ಲೇ ಇರಬೇಕೆಂದು ಮನವಿ ಮಾಡಿದ್ದಾರೆ. ಇವೆಲ್ಲವನ್ನೂ ಪಾಲಿಸಬೇಕು ಎಂದರು. ಈವರೆಗೆ ಲಾಕ್​ಡೌನ್​ ಪಾಲಿಸದ 55 ಸಾವಿರದ 633 ವಾಹನಗಳನ್ನ ಜಪ್ತಿ ಮಾಡಲಾಗಿದೆ, 4169 ಜನರ ವಿರುದ್ಧ ಕೇಸ್​ದ ದಾಖಲಾಗಿದೆ, 2185 ಜನರನ್ನ ಬಂಧಿಸಲಾಗಿದೆ. 95 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದೇವೆ. ಇವತ್ತಿನಿಂದ ಇನ್ನೂ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ. ಜನರು ಇದಕ್ಕೆ ಸಹಕರಿಸಬೇಕೆಂದು ವಿನಂತಿಸುತ್ತೇನೆ ಎಂದರು.

error: Content is protected !!
Scroll to Top