ಸೋಮವಾರ ರಾಜ್ಯದಲ್ಲಿ 15 ಮಂದಿಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 247 ಕ್ಕೆ ಏರಿಕೆ

ಬೆಂಗಳೂರು, ಎ.13: ರಾಜ್ಯದಲ್ಲಿ ಸೋಮವಾರ ಮತ್ತೆ ಕೊರೋನ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇಂದು ಮಧ್ಯಾಹ್ನದ ವೇಳೆಗೆ 15 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.

 

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 15 ಮಂದಿಗೆ ಕೊರೋನ ವೈರಸ್ ತಗುಲಿರುವುದನ್ನು ದೃಢಪಡಿಸಲಾಗಿದೆ.

ಈ ಪೈಕಿ ಧಾರವಾಡ ಜಿಲ್ಲೆಯಲ್ಲಿ ನಾಲ್ವರಿಗೆ ಸೋಂಕು ತಗುಲಿದೆ. ಉಳಿದಂತೆ ಮಂಡ್ಯ, ಬೆಳಗಾವಿಯಲ್ಲಿ ಮೂವರಿಗೆ , ಬಾಗಲಕೋಟೆ ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

Also Read  ಉಪ್ಪಿನಂಗಡಿ: ಜೀಪ್ ಮತ್ತು ಕಂಟೇನರ್ ನಡುವೆ ಭೀಕರ ಅಪಘಾತ ➤ ಏಳು ಮಂದಿ ಗಂಭೀರ, ಮೂವರ ಸ್ಥಿತಿ ಚಿಂತಾಜನಕ

ಇನ್ನು ಕೊರೋನ ವೈರಸ್ ಸೋಂಕು ತಗುಲಿದ್ದ ಸುಮಾರು 59 ಮಂದಿ ಇದುವರೆಗೆ ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

error: Content is protected !!
Scroll to Top