ಪೊಲೀಸರನ್ನೇ ಬಿಡದ ಕೊರೋನಾ ➤ ಐವರು ಪೊಲೀಸ್ ಸಿಬ್ಬಂದಿಗಳು ಹೋಂ ಕ್ವಾರಂಟೈನ್ ನಲ್ಲಿ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಎ.13. ಜಗತ್ತನ್ನೇ ಬೆಚ್ಚಿಬೀಳಿಸಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಕೊರೋನಾ ಮಹಾಮಾರಿಯ ಬಿಸಿ ಖಾಕಿ ಪಡೆಗೂ ತಟ್ಟಿದ್ದು, ಐವರು ಪೊಲೀಸರನ್ನು ಕ್ವಾರಂಟೈನ್ ನಲ್ಲಿ ಕಳುಹಿಸಲಾಗಿದೆ.


ಹುಬ್ಬಳ್ಳಿಯಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಕಾರಣ ಐವರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕೊರೋನಾ ಸೋಂಕಿತನ ಜೊತೆ ಪ್ರಾಥಮಿಕ ಸಂರ್ಪಕ ಹೊಂದಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐವರು ಪೊಲೀಸ್ ಸಿಬ್ಬಂದಿಗಳ ಕೈಗೆ ಆರೋಗ್ಯ ಇಲಾಖೆಯು ಸೀಲ್‌ ಹಾಕಿದ್ದು, ಹೋಂ ಕ್ವಾರಂಟೈನ್​​ನಲ್ಲಿರುವಂತೆ ಸೂಷನೆ ನೀಡಿರುವುದಾಗಿ ತಿಳಿದುಬಂದಿದೆ.

Also Read  ಹಿಂದಿ ಜಾಗತಿಕ ಭಾಷೆಯಾಗಿ ಹೊರಹೊಮ್ಮಿದೆ ➤ ಡಾ. ಮನ್ಪಾಲ್ ದೇಸಾಯಿ

error: Content is protected !!
Scroll to Top