ಕಡಬ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಮಿತದರದ ತರಕಾರಿ ಮಾರಾಟ ➤ ಸೊಸೈಟಿ, ಬ್ಯಾಂಕುಗಳ ಮುಂದೆ ಸರತಿ ಸಾಲು

(ನ್ಯೂಸ್ ಕಡಬ) newskadaba.com ಕಡಬ, ಎ.13. ನಿರಂತರವಾಗಿ ಮೂರು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಕಡಬದ ಪ್ರಮುಖ ಬ್ಯಾಂಕುಗಳ ಮುಂಭಾಗದಲ್ಲಿ ಜನಜಂಗುಳಿ ಇದ್ದು, ಸರತಿ ಸಾಲಿನಲ್ಲಿ ಗ್ರಾಹಕರು ಕಾಯುತ್ತಿದ್ದ ದೃಶ್ಯ ಸೋಮವಾರದಂದು ಕಂಡುಬಂತು.

ಕೆಲಸವಿಲ್ಲದೆ ಗ್ರಾಹಕರು ಕಂಗಾಲಾಗಿದ್ದು, ದಿನಸಿ ಸಾಮಾಗ್ರಿಗಳ ಖರೀದಿಗೆ ಮಧ್ಯಮ ವರ್ಗದ ಜನತೆ ತಲೆ ಮೇಲೆ ಕೈ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಜನತೆಗೆ ಸರಕಾರದಿಂದ ಪಡಿತರ, ದಾನಿಗಳಿಂದ ಸಹಾಯದ ರೂಪದಲ್ಲಿ ಪಡಿತರ ಕಿಟ್ ದೊರೆತರೆ ಮಧ್ಯಮ ವರ್ಗದ ಜನತೆ ಬ್ಯಾಂಕ್ ನಲ್ಲಿಟ್ಟಿದ್ದ ಅಲ್ಪಸ್ವಲ್ಪ ಹಣವನ್ನು ತೆಗೆದು ದಿನಬಳಕೆಯ ವಸ್ತುಗಳನ್ನು ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದಕ್ಕಾಗಿ ಕಡಬದ ಸಿಂಡಿಕೇಟ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡ ಮುಂಭಾಗದಲ್ಲಿ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಹಣ ತೆಗೆಯಲು ಕಾಯುತ್ತಿದ್ದ ದೃಶ್ಯ ಕಂಡುಬಂತು. ಇನ್ನೊಂದೆಡೆ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಈರುಳ್ಳಿ, ಮೆಣಸು, ತರಕಾರಿ ಮಿತದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಅಲ್ಲೂ ಜನರನ್ನು ನಿಯಂತ್ರಿಸುವಲ್ಲಿ ಸಂಘದ ಸದಸ್ಯರು, ಪೊಲೀಸರು ಹೈರಾಣಾಗಿದ್ದಾರೆ.

Also Read  ಮಕ್ಕಳ ಆನ್ ಲೈನ್ ವಿದ್ಯಾಭ್ಯಾಸಕ್ಕೆಂದು ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಮಾರಿದ ತಂದೆ ➤ ನೆರವಿಗೆ ಮುಂದಾದ ರೀಲ್ ಲೈಫ್ ವಿಲನ್

error: Content is protected !!
Scroll to Top