ಕಾಂಗ್ರೆಸ್  ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ರಾಜಶೇಖರ್ ನಿಧನ

ಬೆಂಗಳೂರು, ಎ.13: ಕಾಂಗ್ರೆಸ್  ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಎಂ.ವಿ. ರಾಜಶೇಖರ್ (92) ಸೋಮವಾರ ಬೆಳಗ್ಗೆ ನಿಧನರಾದರು.

ಅವರು ಬಹು ಅಂಗಾಗ ವೈಪಲ್ಯದಿಂದ ಬಳಲುತ್ತಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪುತ್ರ ತಿಳಿಸಿದ್ದಾರೆ. ರಾಜಶೇಖರನ್‌ ಅವರು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದು ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 92 ವರ್ಷ ವಯಸ್ಸಿನ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿಯಲ್ಲಿ ಜನಿಸಿದ್ದು ಕರ್ನಾಟಕದ ಉತ್ತಮ ರಾಜಕಾರಣಿಗಳಲ್ಲಿ ಓರ್ವರಾಗಿದ್ದಾರೆ.

Also Read  ತಂದೆಯನ್ನ ಕಾಣಲು ಜಮೀನಿಗೆ ಹೋಗಿದ್ದ ಬಾಲಕ !       ➤  ಕಾಲುವೆಗೆ ಬಿದ್ದು ಮೃತ್ಯು

 

error: Content is protected !!
Scroll to Top