ಕೊರೋನಾ ಲಾಕ್ಡೌನ್ ಎಫೆಕ್ಟ್ ➤ ತಲೆ ಮೇಲೆ ಕೈ ಹೊತ್ತು ಕುಳಿತ ಮಧ್ಯಮ ವರ್ಗದ ಜನತೆ

✍? ವಿಜಯ್ ಕುಮಾರ್ ಕಡಬ

ವಿಶೇಷ ಲೇಖನ: ಬಡವರನ್ನು ರಕ್ಷಣೆ ಮಾಡಲು ಸರಕಾರ ಇದೆ, ಶ್ರೀಮಂತರಿಗೆ ಯಾವುದೇ ತೊಂದರೆ ಇಲ್ಲ, ಅವರ ಜೀವನ ಹೇಗೋ ನಡೆಯುತ್ತದೆ, ಆದರೆ ಸಾಲ ಮಾಡಿಕೊಂಡು ಸಣ್ಣ ಪುಟ್ಟ ಉದ್ಯಮ, ಕೃಷಿ, ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿರುವ ನಮ್ಮ ಪಾಡೇನು ಎಂಬ ಪ್ರಶ್ನೆಗಳು ಇದೀಗ ಕೆಲವು ದಿನಗಳಿಂದ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿರುವ ಮಾತು. ಇಂದಿನ ಪರಿಸ್ಥಿತಿಯನ್ನು ಕಂಡು ಕಂಗಲಾಗಿರುವ ಮಧ್ಯಮ ವರ್ಗದವರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಈಗಾಗಲೇ ಲಾಕ್ ಡೌನ್ ಪ್ರಾರಂಭವಾಗಿ 19 ದಿನಗಳು ಕಳೆಯುತ್ತಿದೆ, ಜನತೆ ಇನ್ನಷ್ಟು ದಿನಗಳಲ್ಲಿ ಲಾಕ್ ಡೌನ್ನ್ನು ಎದುರಿಸಬೇಕಾಗುತ್ತದೆ. ಈವರೆಗೆ ಲಾಕ್ಡೌನ್ ಎನ್ನುವುದು ಜನರಿಗೆ ಕೆಲವರನ್ನು ಹೊರತುಪಡಿಸಿ ಹೆಚ್ಚಿನ ಜನರಿಗೆ ಹೆಚ್ಚಿನ ತೊಂದರೆಯೇ ಆಗಿಲ್ಲ ಅಂತಾನೇ ಹೇಳಬಹುದು, ಯಾಕೆಂದರೆ ಆಹಾರ ಸಾಮಾಗ್ರಿಗಳ ಕೊರತೆ ಇಲ್ಲ, ಹೆಚ್ಚಿನವರಲ್ಲಿ ತಿಂಗಳಿಗೆ ಬೇಕಾದಂತಹ ಸಾಮಾಗ್ರಿಯ ಹಣವನ್ನು ಹೊಂದಿಸಿಕೊಳ್ಳಲು ಅಷ್ಟಾಗಿ ಕಷ್ಟವಾಗಿಲ್ಲ ಎನ್ನಬಹುದು. ಅಲ್ಲದೆ ಕುಟುಂಬವರ್ಗದೊಡನೆ ಆರಾಮವಾಗಿಯೇ ಕಳೆದಿದ್ದಾರೆ. ಆದರೆ ಚಿಂತೆ ಪ್ರಾರಂಭವಾಗಿರುವುದು ಇನ್ನು, ಒಂದೆಡೆ ಇಷ್ಟು ದಿನದ ಲಾಕ್ ಡೌನ್ ಸಾಕಪ್ಪ ಎಂದ ಜನತೆಗೆ ಮುಂದೆಯೂ ಲಾಕ್ ಡೌನ್ ಮುಂದುವರಿಯುತ್ತದೆ ಎನ್ನುವ ಸ್ಪಷ್ಟ ಸೂಚನೆಗಳು ಲಭಿಸಿರುವುದರಿಂದ ಇನ್ನು ಮುಂದಿನ ದಿನಗಳು ಹೇಗಾಪ್ಪ ಎಂದು ಹೆಚ್ಚಿನವರ ಬಾಯಲ್ಲಿ ಹರಿದಾಡುತ್ತಿರುವ ಮಾತು.


ಕಡು ಬಡವರು ಚಿಂತಿಸಬೇಕಿಲ್ಲ, ರಕ್ಷಣೆ ಇದೆ:
ಈಗಾಗಲೇ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿರುವವರಿಗೆ ಮತ್ತು ಅತ್ಯಂತ ಕಡುಬಡವರನ್ನು ಸಹಜವಾಗಿಯೇ ಸರಕಾರಗಳು ಪಡಿತರ ಅಕ್ಕಿ ವಿತರಣೆ ಅಥಾವ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ವಿವಿಧ ಆಹಾರ ಕಿಟ್, ಅಕ್ಕಿ ಸಾಮಾಗ್ರಿಗಳನ್ನು ನೀಡಿ ಅವರ ಜೀವನಕ್ಕೆ ನೆರವಾಗಿದ್ದಾರೆ, ಇದು ಸಹಜವಾಗಿ ನಡೆಯಬೇಕಾಗಿರುವುದು ಮತ್ತು ಉತ್ತಮ ಬೆಳವಣಿಗೆಯಾಗಿದೆ. ಬಡವರು ತಮಗೆ ಬೇಕಾದ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳುವುದರಲ್ಲಿ ಅವರಿಗೇನು ಮುಲಾಜಿಯೂ ಇರುವುದಿಲ್ಲ, ಸರಕಾರಗಳು ಅವರ ರಕ್ಷಣೆಗೆ ನಿಂತಿದೆ.

Also Read  ಸರಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಸೋಮವಾರ ಕರ್ನಾಟಕ ಬಂದ್ ► ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ

ಶ್ರೀಮಂತರಿಗೆ ಯಾವ ಚಿಂತೆಯೂ ಇಲ್ಲ:
ಕಡು ಬಡವರು ಮತ್ತು ಬಡವರ್ಗದವರ ಸ್ಥಿತಿ ಈ ರೀತಿ ಆದರೆ ಶ್ರೀಮಂತ ವರ್ಗದವರ ಸ್ಥಿತಿ ಬಗ್ಗೆ ಏನೂ ಹೇಳಬೇಕಾಗಿಲ್ಲ, ಇವರಿಗೆ ಆಹಾರ ಸಾಮಾಗ್ರಿ ದೊರೆಯುವಷ್ಟು ದಿನ ಯಾವ ಸಮಸ್ಯೆಯೂ ಎದುರಾಗದು, ಯಾಕೆಂದರೆ ಅವರ ಸ್ಥಿತಿಗತಿಗಳು ಹಾಗೆ ಇರುತ್ತದೆ. ಇಂತಹ ಶ್ರೀಮಂತ ವರ್ಗದವರು ತಮ್ಮ ಕೈಲಾದಷ್ಟು ಸಹಾಯ ಮಾಡುವುದು ಗುರುತಿಸುವುದು ಕಡು ಬಡವರು, ಮತ್ತು ಬಡವರನ್ನು ಇದು ಕೂಡ ಸಹಜವಾದ ಪ್ರಕ್ರಿಯೇ ಆಗಿದೆ.

ಹೆಚ್ಚಿನ ಹೊಡೆತ ಮಧ್ಯಮ ವರ್ಗದವರ ಮೇಲೆ:
ಬಡವರು ಮತ್ತು ಶ್ರೀಮಂತರ ಜೀವನ ಸ್ಥಿತಿಗತಿಗಳು ಈ ರೀತಿಯಾದರೆ, ಬಡವ ಶ್ರೀಮಂತ ಇವರ ಮಧ್ಯೆ ಎರಡು ವಿಧಗಳಲ್ಲಿ ಕಾಣುವ ಮಧ್ಯಮ ವರ್ಗದವನ ಪರಿಸ್ಥಿತಿ ಮಾತ್ರ ನಿಜಕೂ ಶೋಚನಿಯವಾಗಿದೆ. ಇತ್ತ ಸಹಾಯ ಕೇಳುವಾಗಿಯೂ ಇಲ್ಲ, ಕೊಡುವವರು ಇಲ್ಲ ಎನ್ನುವಂತ ಸ್ಥಿತಿಯಲ್ಲಿ ಕೆಳಗೆ ಬಿಟ್ಟು ಮೇಲೆಯೂ ಸಿಗದೆ ಮಧ್ಯದಲ್ಲಿ ನೇತಾಡುವ ಪರಿಸ್ಥಿತಿ ಮಧ್ಯಮ ವರ್ಗದವನಾಗಿದೆ. ಮಧ್ಯಮ ವರ್ಗ ಅಂದರೆ ಇಲ್ಲಿ ಸಣ್ಣ ಸಣ್ಣ ವ್ಯಾಪಾರಿಗಳು, ಸಣ್ಣ ಮಟ್ಟಿನ ಕೃಷಿಕರು ಆಗಿದ್ದಾರೆ, ನೋಡಲು ಅಂದವಾದ ಮನೆ, ಕಾರು ಬೈಕ್ ಎಲ್ಲವೂ ಇದೆ, ಬ್ಯಾಂಕ್ಗಳಲ್ಲಿ ಅಷ್ಟೆ ಸಾಲವೂ ಇದೆ, ಬ್ಯಾಂಕ್ ಸಾಲ ಇದ್ದವರಿಗೆ ದೇಶದ ಇಂತಹ ಪರಿಸ್ಥಿತಿಗಳು ತುಂಬಾ ಹೊಡೆತವನ್ನೆ ನೀಡಿದೆ, ಸರಕಾರ ಮೂರು ತಿಂಗಳ ಕಂತು ಪಾವತಿಗೆ ವಿನಾಯಿತಿ ನೀಡಿದರೂ ಮುಂದಿನ ಕಂತು ಕಟ್ಟಬೇಕಾದರೆ ಅದಕ್ಕೆ ಹೇಗಾಪ್ಪ ಹಣ ಹೊಂದಿಸಿಕೊಳ್ಳುವುದು ಎಂಬ ಚಿಂತೆಯಲ್ಲಿರುವುದಂತು ಸತ್ಯ. ದಿನನಿತ್ಯದ ವ್ಯಾಪಾರ ಅಥಾವ ಸಣ್ಣ ಮಟ್ಟಿನ ಕೃಷಿ ಉತ್ಪನ್ನಗಳಿಂದ ಜೀವನ ಸಾಗಾಟ ಮಾಡುತ್ತಿದ್ದವರು ಅತ್ತ ಬಡತನದ ಸ್ಥಿತಿಯಲ್ಲಿ ಇರಲು ಆಗದೆ, ತಮ್ಮತನವನ್ನು ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಮಧ್ಯಮ ವರ್ಗದ ಹೆಚ್ಚಿನವರಿಗೆ ಎ.ಪಿ.ಎಲ್ ಪಡಿತರ ಚೀಟಿ ಇರುವುದರಿಂದ ಇತ್ತ ಸರಕಾರದ ಕೆಲವೊಂದು ಉಚಿತ ಸೌಲಭ್ಯಗಳು ಸಿಗುತ್ತಿಲ್ಲ, ಪಡಿತರ ಅಂಗಡಿಯಲ್ಲಿ ಕೆ.ಜಿ.ಗೆ 15ರಂತೆ ಹಣ ನೀಡಿ ಅಕ್ಕಿ ಖರೀದಿಸಬೇಕಾಗುತ್ತದೆ. ಈ ಲಾಕ್ ಡೌನ್ ಸಂದರ್ಭದಲ್ಲಿ ಆದರೂ ಸರಕಾರ ಉಚಿತವಾಗಿ ನೀಡಬೇಕಿತ್ತು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ.

Also Read  ಪಾಕ ಶಾಲೆಯಾದ ಪಾಠಶಾಲೆ ➤ ಬಾಣಸಿಗರಾದ ಉಪನ್ಯಾಸಕರು


ಕೊರೋನಾಕ್ಕೆ ಬಡವ, ಶ್ರೀಮಂತನಿಲ್ಲ, ಸರಕಾರದ ಆದೇಶ ಪಾಲಿಸೋಣ:
ಮೇಲಿನ ಎಲ್ಲಾ ವಿಚಾರಗಳು ಲಾಕ್ಡೌನ್ ನಿಂದ ಆಗಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗಿದೆ, ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿರುವುದು ಕೊರೋನಾದಂತಹ ವೈರಸ್ ಹರಡುವುದನ್ನು ತಡೆಗಟ್ಟುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ, ಕೊರೋನಾಕ್ಕೆ ಬಡವ ಶ್ರೀಮಂತನೆಂಬ ಭೇದ ಭಾವವಿಲ್ಲ, ಮುಂಜಾಗ್ರತಾ ಕ್ರಮಗಳನ್ನು ಅನುಸರಿದೆ ಇದ್ದರೆ ಯಾರಿಗೂ ಬರಬಹುದಾಗಿದೆ, ಅದಕ್ಕಾಗಿ ಸರಕಾರ ಲಾಕ್ಡೌನ್ ಜಾರಿಗೆ ತಂದಿದೆ, ಇದನ್ನು ನಾವು ಕಟ್ಟು ನಿಟ್ಟಾಗಿ ಪಾಲಿಸಲೇ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಬಲಾಡ್ಯರಾಗಿರುವವರು ತಮ್ಮ ಸುತ್ತ ಮುತ್ತ ಇರುವ ಬಡವರ ಜತೆ, ಅಶಕ್ತ ಮಧ್ಯಮ ವರ್ಗದವರನ್ನು ಮೇಲೆತ್ತಬೇಕಾದ ಅನಿವಾರ್ಯತೆ ಎದುರಾಗಿದೆ, ಒಟ್ಟಿನಲ್ಲಿ ವಿಶ್ವಕ್ಕೆ ವ್ಯಾಪಿಸಿರುವ ಕೊರೋನಾ ಮಹಾ ಮಾರಿ ಜನರನ್ನು ಕಂಗೆಡಿಸಿರುವುದು ಸತ್ಯ.

Also Read  ಕಲ್ಲಡ್ಕ ಪೇಟೆಯ ಸ್ವಚ್ಚತೆಗೆ ಸವಾಲಾಗಿರುವ ಕಸದ ರಾಶಿ..! ➤ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

✍? ವಿಜಯ್ ಕುಮಾರ್ ಕಡಬ

error: Content is protected !!
Scroll to Top