ಕೊರೋನಾ ಪೀಡಿತ 10 ತಿಂಗಳ ಮಗು ಸಂಪೂರ್ಣ ಗುಣಮುಖ ➤ ಆಸ್ಪತ್ರೆಯಿಂದ ಡಿಸ್ಚಾರ್ಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಎ.11. ಕೊರೊನಾ ಪಾಸಿಟಿವ್‌ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗು ಸಂಪೂರ್ಣ ಗುಣಮುಖವಾಗಿದ್ದು, ಮಗುವನ್ನು ಶನಿವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಹತ್ತು ತಿಂಗಳ ಮಗುವಿಗೆ ಕೊರೋನಾ ಬಾಧಿಸಿದ್ದರಿಂದ ಕರಾವಳಿಯ ಜನತೆ ಆತಂಕಗೊಂಡಿದ್ದರು. ಆದರೆ ಇದೀಗ ಮಗುವಿನ ವೈದ್ಯಕೀಯ ವರದಿ ಬಂದಿದ್ದು, ಕೊರೋನಾ ಸೋಂಕು ಸಂಪೂರ್ಣ ಗುಣಮುಖವಾಗಿದೆ‌. ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಗುವನ್ನು ಮಾರ್ಚ್ 23ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನಲ್ಲಿ ಶಂಕಿತ ಕೊರೊನಾ ಸೋಂಕು ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಮಗುವಿನ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ಮಾ.26ರಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಇದೀಗ ಮಗು ಸಂಪೂರ್ಣ ಗುಣಮುಖಗೊಂಡಿದ್ದು, ಮನೆಗೆ ಕಳುಹಿಸಲಾಗಿದೆ.

Also Read  ʼಹಿಂದುತ್ವʼದ ಬದಲು 'ಭಾರತೀಯ ಸಂವಿಧಾನತ್ವ' ಪದ ಬಳಕೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

error: Content is protected !!
Scroll to Top