ಲಾಕ್ ಡೌನ್ ಎಫೆಕ್ಟ್ ➤ 40 ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿ ನೀಡಿದ ಪ್ರಕಾಶ್ ಎನ್.ಕೆ.

(ನ್ಯೂಸ್ ಕಡಬ) newskadaba.com ಕಡಬ, ಎ.11. ಕೊರೋನಾ ವೈರಸ್ ಮುಂಜಾಗ್ರತ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದರ ಪರಿಣಾಮ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ.

ದುಡಿದು ಜೀವನ ಸಾಗಿಸುವ ಜನರಿಗೆ ಜೀವನ ನಿರ್ವಹಣೆಗೆ ಅಡಚಣೆ ಆಗಬಾರದೆನ್ನುವ ಇರಾದೆಯಲ್ಲಿ ಕಡಬದ ಬಿಜೆಪಿ ಯುವ ಮುಖಂಡ, ಸಾಮಾಜಿಕ ಮುಂದಾಳು ಪ್ರಕಾಶ್ ಎನ್.ಕೆ. ಅವರು
ಕೋಡಿಂಬಾಳ ಗ್ರಾಮದ ಬೆದ್ರಾಜೆ ಕಾಲೊನಿಯ 40 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡಿ ತುರ್ತು ಸಂದರ್ಭದಲ್ಲಿ ಸ್ಪಂದಿಸಿದ್ದಾರೆ. ಸುಮಾರು 40 ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸ್ಥಿತಿಗತಿ ಗಮನಿಸಿ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ.

Also Read  ಎನ್.ಎಸ್.ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜೆಸಿಐ ಸುಳ್ಯ ಸಿಟಿ ವತಿಯಿಂದ ಹೊಸ ವರ್ಷಾಚರಣೆ

error: Content is protected !!
Scroll to Top