ರಾಜ್ಯದಲ್ಲಿ ಎಪ್ರಿಲ್ 30 ರ ವರೆಗೆ ಲಾಕ್ಡೌನ್ ವಿಸ್ತರಣೆ ➤ ಮುಂದಿನ ಲಾಕ್ಡೌನ್ ವಿಭಿನ್ನವಾಗಿರಲಿದೆ: ಸಿಎಂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.11. ರಾಜ್ಯದಲ್ಲಿ ಲಾಕ್ಡೌನ್ ಎಪ್ರಿಲ್ 30 ರ ವರೆಗೆ ಮುಂದುವರಿಸುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳಿವು ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದ ಅವರು, ಮಾರಣಾಂತಿಕ ಕೊರೋನಾ ವೈರಸ್‌ ಜಗತ್ತಿನಾದ್ಯಂತ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಇದರ ನಿಯಂತ್ರಣಕ್ಕಾಗಿ ದೇಶದಾದ್ಯಂತ ಘೋಷಿಸಲಾಗಿದ್ದ ಲಾಕ್‌ ಡೌನ್‌ ಏಪ್ರಿಲ್‌ 14 ರಂದು ಅಂತ್ಯವಾಗುತ್ತಿದ್ದು, ಇದನ್ನು ಏಪ್ರಿಲ್‌ 30 ರವರೆಗೆ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ. ಮುಂದಿನ ಲಾಕ್ಡೌನ್ ವಿಭಿನ್ನವಾಗಿರಲಿದ್ದು, ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.

Also Read  ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ➤ ಮಾದಕ ವಸ್ತುಗಳ ಸಹಿತ ಮೂವರು ಅರೆಸ್ಟ್

error: Content is protected !!
Scroll to Top