ಎ.10-12: ಪಡಿತರ ವಿತರಿಸಲು ಡಿಸಿ ಸಿಂಧೂ ರೂಪೇಶ್ ಸೂಚನೆ

ಮಂಗಳೂರು, ಎ.9: ಕೊರೋನ ವೈರಸ್ ಹಿನ್ನೆಲೆಯಲ್ಲಿ ರೇಷನ್ ವಿತರಣೆ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಗುಡ್ ಫ್ರೈಡೆ ದಿನವಾದ ಎ.10ರಂದು ದ.ಕ. ಜಿಲ್ಲೆಯಲ್ಲಿ ರೇಷನ್ ವಿತರಣೆ ನಡೆಯಲಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ನೀಡಿದ್ದು, ಗುಡ್ ಫ್ರೈಡೆ ದಿನಂದಂದು ಸರಕಾರಿ ರಜೆಯಿದ್ದರೂ ಕೂಡ ರೇಷನ್ ಅಂಗಡಿಗಳು ತೆರೆದಿರುತ್ತವೆ. ಹಾಗೂ ಜನಸಾಮಾನ್ಯರಿಗೆ ಪಡಿತರ ಸಾಮಾಗ್ರಿಗಳನ್ನು ವಿತರಿಸಲಾಗುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಎಂದಿನಂತೆ ಬೆಳಗ್ಗಿನಿಂದ ಸಂಜೆಯ ತನಕ ಜನಸಾಮಾನ್ಯರಿಗೆ ಪಡಿತರ ಸಾಮಾಗ್ರಿಗಳು ಲಭ್ಯವಾಗಲಿವೆ. ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರ ಸಾಮಾಗ್ರಿಗಳನ್ನು ಏಕಕಾಲದಲ್ಲಿ ವಿತರಿಸಬೇಕಾಗಿರುವುದರಿಂದ ಗುಡ್ ಫ್ರೈಡೆ ದಿನ ಸೇರಿದಂತೆ ಏಪ್ರಿಲ್ 11 ಹಾಗೂ 12ರಂದು ಕೂಡ ಅಂಗಡಿಗಳು ತೆರೆದಿರುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Also Read  ಕಡಬ ತಾಲೂಕಿನಲ್ಲಿ ಕೊರೋನಾ ಆರ್ಭಟ ➤ ಕಡಬದಲ್ಲಿಂದು ಇಂದು 30 ಮಂದಿಗೆ ಕೊರೋನಾ ದೃಢ

error: Content is protected !!
Scroll to Top