ಸದ್ದಿಲ್ಲದೆ ಬಡವರ ಪಾಲಿಗೆ ವರವಾಗುತ್ತಿರುವ ಕಡಬದ ಯುವ ಉದ್ಯಮಿ ➤ ಪ್ರಚಾರದ ಹಂಗಿಲ್ಲದೆ 300 ಕುಟುಂಬಗಳಿಗೆ ಅಕ್ಕಿ ದಾನ

(ನ್ಯೂಸ್ ಕಡಬ) newskadaba.com ಕಡಬ, ಎ.09. ಕೊರೋನಾ ವೈರಸ್ ನಿಂದ ದೇಶ ತತ್ತರಿಸುತ್ತಿರುವ ಸಂದರ್ಭದಲ್ಲಿ ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಬಡ ಕುಟುಂಬಗಳಿಗೆ ಸದ್ದಿಲ್ಲದೆ ಸುಮಾರು 15 ಕ್ವಿಂಟಾಲ್‌ಗೂ ಹೆಚ್ಚು ಅಕ್ಕಿ ವಿತರಿಸಿ ಕಡಬದ ವ್ಯಕ್ತಿಯೋರ್ವರು ಮಾನವೀಯತೆ ಮೆರೆದಿದ್ದಾರೆ.

ಕಡಬದ ಮಹಾಗಣಪತಿ ಡ್ರೈವಿಂಗ್ ಸ್ಕೂಲ್ ಮಾಲಕ ನಿತಿನ್ ಕೋಡಿಂಬಾಳ ಯಾವುದೇ ಪ್ರಚಾರದ ಹಂಗಿಲ್ಲದೆ ಬಡ ಜನತೆಯ ಪಾಲಿಗೆ ವರವಾಗಿದ್ದಾರೆ. ಕಡಬ ಪರಿಸರದ ವಿವಿಧೆಡೆಯ ಬಡ, ಅಶಕ್ತ, ವಿಕಲಚೇತನ ಕೂಲಿ ಕಾರ್ಮಿಕರನ್ನು ಮೂಲವಾಗಿರಿಸಿಕೊಂಡು ಇಲ್ಲಿಯವರೆಗೆ ಸುಮಾರು 15 ಕ್ವಿಂಟಾಲ್ ಅಕ್ಕಿಯನ್ನು ವಿತರಿಸಿದ್ದಾರೆ‌. ಯಾವುದೇ ಪ್ರಚಾರದ ಹಂಗಿಲ್ಲದೆ ಸುಮಾರು 300 ಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿದ್ದಾರೆ. ದಯಾನಂದ ಉಂಡಿಲ, ವಿಘ್ನೇಶ್ ಕೊಟ್ಟಾರಿ, ರಮೇಶ್ ಕೊಟ್ಟಾರಿ, ಸಂಜೀವ ನಾಯ್ಕ್, ರಘುರಾಮ ನಾಯ್ಕ್, ಮೋಹನ್ ಕೋಡಿಂಬಾಳ ಮೊದಲಾದವರು ಸಹರಿಸಿದ್ದಾರೆ.

Also Read  ಉಡುಪಿ: ಅಕ್ರಮ ಮರಳು ಸಾಗಾಟ ➤ ಎರಡು ಮಿನಿ ಟಿಪ್ಪರ್ ಸೇರಿದಂತೆ ಐದು ಟಿಪ್ಪರ್ ವಶಕ್ಕೆ

error: Content is protected !!
Scroll to Top