ರಾಜ್ಯದಲ್ಲಿ ಮತ್ತೆ 6 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ

ಬೆಂಗಳೂರು, ಎ.9: ರಾಜ್ಯದಲ್ಲಿ ಮತ್ತೆ ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 197ಕ್ಕೇರಿದೆ. ಬೆಳಗಾವಿಯಲ್ಲಿ ಒಂದೇ ಕುಟುಂಬದ ನಾಲ್ವರಿಗೆ ತಗುಲಿದ ಸೋಂಕು ತಗುಲಿದೆ. ತಾಲೂಕಿನ ಹಿರೇಬಾಗೇವಾಡಿಯ ಸೋಂಕಿತನ ತಂದೆ, ತಾಯಿ ಹಾಗೂ ಸಹೋದರನಿಗೂ ಸೋಂಕು ದೃಢವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ದಿಲ್ಲಿ ಪ್ರಯಾಣದ ಹಿನ್ನೆಲೆ ಹೊಂದಿರುವ 27 ವರ್ಷದ ಪುರುಷರೊಬ್ಬರಲ್ಲಿ ಈ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟನೆ ತಿಳಿಸಿದೆ. ಉಳಿದಂತೆ ಬೆಂಗಳೂರು ನಗರದ ಮೂವರಿಗೆ ಸೋಂಕು ತಾಗಿರುವುದು ಖಚಿತವಾಗಿದೆ.

Also Read  ತೊಕ್ಕೊಟ್ಟು: ಟಿಪ್ಪರ್ ಲಾರಿ ಹಾಗೂ ಓಮ್ನಿ ಕಾರು ನಡುವೆ ಭೀಕರ ಅಪಘಾತ ➤ ಇಬ್ಬರಿಗೆ ಗಂಭೀರ

error: Content is protected !!
Scroll to Top