ಬೆಂಗಳೂರು, ಎ.9: 4 ವರ್ಷದ ಮಗು ಸೇರಿದಂತೆ ಗುರುವಾರ ಒಟ್ಟು 10 ಮಂದಿಗೆ ಕೊರೋನ ಸೋಂಕು ತಗುಲಿದ್ದು, ಗದಗಿನ 80 ವರ್ಷದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 191ಕ್ಕೇರಿಕೆಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. 28 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಬೆಳಗಾವಿಯ 50 ವರ್ಷದ ವ್ಯಕ್ತಿ, ಮೈಸೂರಿನ 55 ಹಾಗೂ 68 ವರ್ಷದ ವ್ಯಕ್ತಿಗಳು, ನಂಜನಗೂಡಿನ ಔಷಧ ಕಂಪೆನಿಯ ಉದ್ಯೋಗಿಯ ಸಹ ಪ್ರಯಾಣಿಕನಾಗಿದ್ದ 32 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ.
ಬಾಗಲಕೋಟೆಯ 165ನೇ ರೋಗಿಯ 4 ವರ್ಷದ ಪುತ್ರ, 13 ವರ್ಷದ ಸಂಬಂಧಿಕರ ಗಂಡು ಮಗು ಮತ್ತು 9 ವರ್ಷದ ಹೆಣ್ಣುಮಗುವಿಗೂ ಸೋಂಕು ತಗುಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ದಿಲ್ಲಿ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿರುವ 19 ವರ್ಷದ ಹೆಣ್ಣು ಹಾಗೂ 27 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಪತ್ತೆಯಾದ #ಕೋವಿಡ್19 ಪ್ರಕರಣಗಳ ಮಾಹಿತಿ
ರಾಜ್ಯದಲ್ಲಿ ಈವರೆಗೆ 191 #ಕೋವಿಡ್19 ದೃಢಪಟ್ಟಿವೆ. ಇದರಲ್ಲಿ ಆರು ಮಂದಿ ಮೃತಪಟ್ಟಿದ್ದು, 28 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಉಳಿದವರ ಚಿಕಿತ್ಸೆ ಮುಂದುವರೆದಿದೆ. ಹೊಸ 10 ಪ್ರಕರಣಗಳ ವಿವರಗಳಿವೆ. 1/2 pic.twitter.com/gE8ljp0Da3
— CM of Karnataka (@CMofKarnataka) April 9, 2020