ಸುಟ್ಟಗಾಯಗಳೊಂದಿಗೆ ಬಂದ ಬಾಲಕನಿದ್ದ ಕೇರಳದ ಆ್ಯಂಬುಲೆನ್ಸ್ ವಾಪಸ್

ಮಂಗಳೂರು, ಎ.8: ಕೇರಳದ ಕಣ್ಣೂರಿನಿಂದ ಸುಟ್ಟಗಾಯಗಳೊಂದಿಗೆ ಬಂದಿದ್ದ ಆ್ಯಂಬುಲೆನ್ಸ್ ಅನ್ನು ಕರ್ನಾಟಕ ಪೊಲೀಸರು ಕೇರಳ-ಕರ್ನಾಟಕ ಗಡಿಭಾಗ ತಲಪಾಡಿಯಲ್ಲಿ ವಾಪಸ್ ಕಳುಹಿಸಿದ್ದಾರೆ. ಕಣ್ಣೂರು ನಿವಾಸಿ ಆದಿತ್ಯ (11) ಎಂಬಾತನನ್ನು ಮಂಗಳೂರಿನ ಆಸ್ಪತ್ರೆಗೆ ಕರೆ ತರುವ ಸಂದರ್ಭ ಆ್ಯಂಬುಲೆನ್ಸ್ ಅನ್ನು ತಡೆದು ವಾಸಸು ಕಳುಹಿಸಲಾಗಿದೆ.

ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಮಾತುಕತೆ ನಡೆಸಿದ್ದು, ಇದರಿಂದಾಗಿ ತುರ್ತು ಚಿಕಿತ್ಸೆಗೆ ಆ್ಯಂಬುಲೆನ್ಸ್ ಗಡಿ ಪ್ರವೇಶ ಮಾಡಬಹುದು ಎಂದು ತಿಳಿಸಿದ್ದರು. ಅದಕ್ಕಾಗಿ ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳ ಪತ್ರ ಹಿಡಿದುಕೊಂಡು ದೂರದ ಕಣ್ಣೂರಿನಿಂದ ಆ್ಯಂಬುಲೆನ್ಸ್ ಮೂಲಕ ಪ್ರಯಾಣ ಬೆಳೆಸಿದ್ದರು.

ಆದರೆ ಬೆಳಗ್ಗೆ 11 ರ ವೇಳೆಗೆ ಗಡಿಭಾಗ ತಲಪಾಡಿಯತ್ತ ಆ್ಯಂಬುಲೆನ್ಸ್ ತಲುಪಿತ್ತು. ಆದರೆ ಸುಪ್ರೀಂ ತೀರ್ಪು ಆ ವೇಳೆ ಬಂದಿರಲಿಲ್ಲ. ದ.ಕ. ಜಿಲ್ಲಾಡಳಿತದ ನಿರ್ದೇಶನ ಇದ್ದರಿಂದ ಆ್ಯಂಬುಲೆನ್ಸ್ಸ್ ಬಿಡಲು ಅಸಾಧ್ಯ ಎಂದು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಬಾಲಕನಿದ್ದ ಆ್ಯಂಬುಲೆನ್ಸ್ ಅನ್ನು ವಾಪಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group