ಲಾಕ್ ಡೌನ್ ಉಲ್ಲಂಘಿಸುವವರಿಗೆ ಕಾದಿದೆ ಲಾಠಿಯೇಟಿನ ಶಿಕ್ಷೆ ➤ ಮತ್ತೆ ಲಾಠಿ ಬಳಸಲು ಪೊಲೀಸರಿಗೆ ಸರಕಾರದಿಂದ ಫುಲ್‌ ಪರ್ಮಿಷನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ.07. ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳಿಗಾಗಿ ಹೊರ ಬರುವ ಸಾರ್ವಜನಿಕರಿಗೆ ಪೊಲೀಸರು ಲಾಠಿಯೇಟು ನೀಡುತ್ತಿದ್ದಾರೆಂಬ ಆರೋಪ ವ್ಯಕ್ತವಾಗಿದ್ದರಿಂದ ಲಾಠಿ ದೂರ ಇಟ್ಟು ಮನವಿಯ ಮೂಲಕ ಕರ್ತವ್ಯ ನಿರ್ವಹಿಸುವಂತೆ ಪೊಲೀಸರಿಗೆ ರಾಜ್ಯ ಸರಕಾರವು ಈ ಹಿಂದೆ ನಿರ್ದೇಶನ ನೀಡಿತ್ತು.

ಆದರೆ ಪೊಲೀಸರ ಮನವಿಯನ್ನು ಕ್ಯಾರೇ ಅನ್ನದ ಸಾರ್ವಜನಿಕರು ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬರುವುದನ್ನು ಮನಗಂಡ ರಾಜ್ಯ ಸರಕಾರವು ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚೆ ನಡೆಸಿ ಪೊಲೀಸರಿಗೆ ಫುಲ್ ಪರ್ಮಿಷನ್ ನೀಡಿದೆ. ಲಾಠಿ ಬಳಸಿಯಾದರೂ ಕೊರೋ‌ನಾ ಮಹಾ ಮಾರಿಯನ್ನು ಹಿಮ್ಮೆಟ್ಟಿಸಬೇಕಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರ‌ಬರದಂತೆ ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Also Read  ಕೊರೋನಾ ಆತಂಕದ ಹಿನ್ನೆಲೆ ➤ ಮಾ.23 ರೊಳಗೆ ಪರೀಕ್ಷೆ ಮುಗಿಸುವಂತೆ ಸೂಚನೆ

error: Content is protected !!
Scroll to Top