ಲಾಕ್ ಡೌನ್ ‌ಉಲ್ಲಂಘಿಸುವವರ ವಿರುದ್ಧ ಮುಂದುವರಿದ ಕಾರ್ಯಾಚರಣೆ ➤ ಕಡಬದಲ್ಲಿ ಬೆಳ್ಳಂಬೆಳಗ್ಗೆ ಹಲವು ಕಾರುಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.06. ಕಳೆದೆರಡು ದಿನಗಳಿಂದ ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿದ್ದ ಹಲವು ಖಾಸಗಿ ಕಾರುಗಳನ್ನು ವಶಪಡಿಸಿಕೊಂಡಿದ್ದ ಕಡಬ ಪೊಲೀಸರು, ಸೋಮವಾರ ಬೆಳಗ್ಗಿನಿಂದ ಮತ್ತೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಲಾಕ್ ಡೌನ್ ವೇಳೆಯಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು ಎಂಬ ಸೂಚನೆಯಿದ್ದರೂ, ಜಿಲ್ಲಾಧಿಕಾರಿಯವರ ಆದೇಶವನ್ನು ಮೀರಿ ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದರು. ಅಂತಹವರಿಗೆ ಶಾಕ್ ನೀಡಿರುವ ಪೊಲೀಸರು ಕಾನೂನು ಉಲ್ಲಂಘಿಸಿದ ಹಲವು ಖಾಸಗಿ ವಾಹನಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದರು. ಸೋಮವಾರ ಕೂಡಾ ಕಾರ್ಯಾಚರಣೆ ಮುಂದುವರಿದಿದ್ದು, ಮತ್ತೆ ಹಲವರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.

Also Read  ಕಡಬ: ಫೈನಾನ್ಸ್ ಗೆ ಹಣ ಕಟ್ಟಲು ತೆರಳಿದ ಯುವಕ ನಾಪತ್ತೆ

error: Content is protected !!
Scroll to Top