3 ತಿಂಗಳ ಬಿಲ್ ಮುಂದೂಡಿಕೆ ಬಗ್ಗೆ ನಿರ್ದೇಶನ ಬಂದಿಲ್ಲ: ಮೆಸ್ಕಾಂ ಸ್ಪಷ್ಟನೆ

ಮಂಗಳೂರು, ಎ.5: ವಿದ್ಯುತ್ ಗ್ರಾಹಕರು 3 ತಿಂಗಳ ಅವಧಿಗೆ ಬಿಲ್ ಪಾವತಿಸುವುದನ್ನು ಮುಂದೂಡುವ ಕುರಿತು ಕೇಂದ್ರ ಇಂಧನ ಸಚಿವಾಲಯದಿಂದ ರಾಜ್ಯ ಸರಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಯಾವುದೇ ನಿರ್ದೇಶನಗಳಿಲ್ಲ. ಗ್ರಾಹಕರು ತಮ್ಮ ವಿದ್ಯುತ್ ಬಿಲ್ ಪಾವತಿಸುವಂತೆ ಮೆಸ್ಕಾಂ ಹಾಗೂ ಬೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

ಎಲ್ಲಾ ವಿದ್ಯುತ್ ಗ್ರಾಹಕರಿಗೆ ಸರಾಸರಿ ಬಿಲ್ ಅನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಹೆಚ್.ಟಿ. ಗ್ರಾಹಕರಿಗೆ ಈಗಾಗಲೇ ವಾಸ್ತವಿಕ ರೀಡಿಂಗ್‌ನಂತೆ ಬಿಲ್ ನೀಡಲಾಗಿರುತ್ತದೆ. ಹಾಲಿ ತಂತ್ರಾಂಶದಲ್ಲಿರುವ ಗ್ರಾಹಕರುಗಳಿಗೆ ವಿದ್ಯುತ್ ಬಿಲ್‌ ಅನ್ನು ಇ-ಮೇಲ್, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್ ಮುಖಾಂತರ ಕಳುಹಿಸಲಾಗುವುದು.

ಗ್ರಾಹಕರು ಸಹಾಯವಾಣಿ 1912ಕ್ಕೆ ಕರೆಮಾಡಿ ಅವರ ಅಕೌಂಟ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿದಲ್ಲಿ ಬಿಲ್ ವಿವರಗಳನ್ನು ಇ-ಮೇಲ್, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್ ಮುಖಾಂತರ ಕಳುಹಿಸಲಾಗುವುದು. ಗ್ರಾಹಕರು ಮೆಸ್ಕಾಂನ ಜಾಲತಾಣನಲ್ಲಿ ನೋಂದಾಯಿಸಿಕೊಂಡು ವಿದ್ಯುತ್ ಬಿಲ್ ವಿವರಗಳನ್ನು ಪಡೆಯಬಹುದು. ಹಾಗೂ ಆನ್‌ಲೈನ್, ಡಿಜಿಟಲ್ ವಿಧಾನಗಳ ಮೂಲಕ ವಿದ್ಯುತ್ ಬಿಲ್ ಪಾವತಿಸಲು ಕೋರಿಕೊಂಡಿದೆ.

Also Read  ರಂಗಸ್ಥಳದಲ್ಲೇ ಪ್ರಾಣಬಿಟ್ಟ ಯಕ್ಷಗಾನ ಕಲಾವಿದ ➤ ಮಂದಾರ್ತಿ ಮೇಳದ ಸಾಧು ಕೊಠಾರಿ ಇನ್ನಿಲ್ಲ

ಯಾವುದೇ ಗ್ರಾಹಕರು ಬಿಲ್ ಪಾವತಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗದಿದ್ದಲ್ಲಿ ಅಂತಹ ಗ್ರಾಹಕರು ಸ್ಥಳೀಯ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸುವುದು, ಅಂತಹ ಅರ್ಜಿಗಳನ್ನು ಉಪ ವಿಭಾಗಾಧಿಕಾರಿಗಳ ಕಚೇರಿಗಳಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲು ಸೂಚಿಸಲಾಗಿದೆ.

error: Content is protected !!
Scroll to Top