ರಾಜ್ಯದಲ್ಲಿ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 146ಕ್ಕೇರಿಕೆ

ಬೆಂಗಳೂರು, ಎ.5: ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ರಾಜ್ಯದಲ್ಲಿ ರವಿವಾರ ಮತ್ತಿಬ್ಬರಿಗೆ ಕೊರೋನ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೇರಿದೆ.

ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿಯಂತೆ ಬೆಂಗಳೂರಿನ ಮಡಿವಾಳದ ಇಬ್ಬರಿಗೆ ಸೋಂಕು ದೃಢವಾಗಿದೆ. ನಗರದ ಮಡಿವಾಳದ ದಂಪತಿಗೆ ಕೊರೋನ ಸೋಂಕು ದೃಢವಾಗಿದೆ.
68 ವರ್ಷದ ಪತಿ ಮತ್ತು 62 ವರ್ಷದ ಪತ್ನಿ ಇತ್ತೀಚೆಗೆ ದುಬೈನಿಂದ ಆಗಮಿಸಿದ್ದರು. ಇವರಿಬ್ಬರು ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು.

ರಾಜ್ಯದಲ್ಲಿ ಇದುವರೆಗೆ 146 ಜನರಿಗೆ ಕೊರೋನ ಸೋಂಕು ದೃಢವಾಗಿದ್ದು ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 11 ಜನರು ಗುಣಮುಖರಾಗಿದ್ದಾರೆ.
ಬೆಂಗಳೂರು ನಗರದಲ್ಲಿ ಒಟ್ಟು 57 ಜನ ಸೋಂಕಿತರಿದ್ದು, ಮೈಸೂರಿನಲ್ಲಿ 28 ಜನರಿಗೆ ಕೊರೋನ ಸೋಂಕು ದೃಢವಾಗಿದೆ.

Also Read  ಕಡಬ ತಾಲೂಕು ಉದ್ಘಾಟನೆ ಮಾ.8 ಶುಕ್ರವಾರ ಸಂಜೆಗೆ ಮುಂದೂಡಿಕೆ ► ಪುತ್ತೂರು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಇಂದು ಕಡಬದಲ್ಲಿ ಪೂರ್ವಭಾವಿ ಸಭೆ

ಶನಿವಾರ ರಾಜ್ಯದಲ್ಲಿ 16 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು.

error: Content is protected !!
Scroll to Top