Breaking news ದ.ಕ. ಜಿಲ್ಲೆಯಲ್ಲಿ ಒಂದೇ ದಿನ ಮೂರು ಕೊರೋನ ಪಾಸಿಟಿವ್: 12ಕ್ಕೇರಿದ ಸೋಂಕಿತರ ಸಂಖ್ಯೆ

ಮಂಗಳೂರು, ಎ.4: ಕಳೆದೆರಡು ದಿನಗಳಿಂದ ಪಾಸಿಟಿವ್ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಶನಿವಾರ ಬೆಚ್ಚಿಬಿದ್ದಿದೆ. ಶನಿವಾರ ಒಂದೇ ದಿನ ಕೋವಿಡ್ 19 ಸೊಂಕಿತ ಮೂರು ಹೊಸದಾಗಿ ಪ್ರಕರಣಗಳು ಪತ್ತೆಯಾಗಿದ್ದು , ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12 ಕ್ಕೆ ಏರಿದೆ.

ದಿಲ್ಲಿಗೆ ತೆರಳಿದ್ದ ದ.ಕ. ಜಿಲ್ಲೆಯ ಇಬ್ಬರಿಗೆ ಕೊರೋನ ಸೋಂಕು ದೃಢವಾಗಿದೆ. ಇನ್ನು ನಿಝಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸದ್ಯದ ಪ್ರಕಾರ 29 ಭಾಗವಹಿಸಿದ ಬಗ್ಗೆ ಮಾಹಿತಿ ಇದ್ದು 9 ಜನರ ವರದಿ ಬಂದಿದ್ದು 2 ಪಾಸಿಟಿವ್ ಆಗಿದೆ. ಉಳಿದ 20 ಜನರ ವರದಿಗಾಗಿ ಜಿಲ್ಲಾಡಳಿತ ನೀರಿಕ್ಷೆಯಲ್ಲಿದೆ.

Also Read  ಕಾರಿಂಜೇಶ್ವರ ಕ್ಷೇತ್ರದ ಸಮೀಪ ಗಣಿಗಾರಿಕೆ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಿ ➤ ಸಚಿವ ಹಾಲಪ್ಪ ಆಚಾರ್ ಗೆ ಪೇಜಾವರ ಶ್ರೀ ಮನವಿ

ದಿಲ್ಲಿಗೆ ತೆರಳಿದ್ದ ಓರ್ವ ಯುವಕ ತುಂಬೆಯ ಮದಕ ಬೊಳ್ಳಾಡಿ ಪ್ರದೇಶದ ನಿವಾಸಿಯಾಗಿದ್ದು , ಈ ಗ್ರಾಮದಲ್ಲಿ 500ಕ್ಕೂ ಮನೆಗಳಿವೆ. ತಹಶೀಲ್ದಾರ್ ಮತ್ತು ಎಸ್ಸೈ ಸ್ಥಳಕ್ಕೆ ಆಗಮಿಸಿದ್ದು ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಯಾರು ಮನೆಯಿಂದ ಹೊರಬಾರದಂತೆ ಪೊಲೀಸರು ಧ್ವನಿವರ್ಧಕ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಎನ್ನಲಾಗಿದೆ

ಇದಲ್ಲದೆ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಕ್ವಾರೇಂಟೈನ್ ನಲ್ಲಿದ್ದ ವ್ಯಕ್ತಿಗೂ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ದ.ಕ. ಜಿಲ್ಲೆಯಲ್ಲಿ ಕೊರೋನ ಸೋಕಿಂತರ ಸಂಖ್ಯೆ 12 ಏರಿಕೆಯಾಗಿದೆ.

error: Content is protected !!
Scroll to Top