Breaking news ತುಂಬೆಯ ಯುವಕನಿಗೆ ಕೊರೋನ ಪಾಸಿಟಿವ್

ಬಂಟ್ವಾಳ, ಎ.4: ತಾಲೂಕಿನ ತುಂಬೆ ಗ್ರಾಮದ ನಿವಾಸಿಯೊಬ್ಬರಿಗೆ ಕೋವಿಡ್ – 19 (ಕೊರೋನ) ಸೋಂಕು ಇರುವುದು ದೃಢಪಟ್ಟಿದೆ ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ.

ವೈಯಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ತರಳಿದ್ದ ತುಂಬೆಯ ಈ ಯುವಕ ಮಾ.21ರಂದು ದೆಹಲಿಯಿಂದ ನಿಝಾಮುದ್ದೀನ್ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ.

ನಿಝಾಮುದ್ದೀನ್ ತಬ್ಲಿಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಮಂದಿಗೆ ಕೊರೋನ ಸೋಂಕು ತಗುಲಿದ ಮಾಹಿತಿಯ ಬಳಿಕ ನಿಝಾಮುದ್ದೀನ್ ರೈಲು ಮೂಲಕ ಮಂಗಳೂರಿಗೆ ಬಂದ ಈ ಯುವಕನನ್ನು ಪ್ರತ್ಯೇಕಿಸಿ ಆತನ ಗಂಟಲ ಸ್ರಾವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.‌ ಇಂದು ಅದರ ವರದಿ ಬಂದಿದ್ದು ವರದಿ ಪಾಸಿಟಿವ್ ಎಂದು ಹೇಳಲಾಗಿದೆ.

Also Read  CPIM ದ.ಕ.ಜಿಲ್ಲಾ ನೂತನ ಕಾರ್ಯದರ್ಶಿಯಾಗಿ ಮುನೀರ್ ಕಾಟಿಪಳ್ಳ ಆಯ್ಕೆ

ಶಿಷ್ಟಾಚಾರದ ಪ್ರಕಾರದ ತುಂಬೆ ಗ್ರಾಮವನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು ಪೊಲೀಸರು ಧ್ವನಿವರ್ಧಕದ ಮೂಲಕ ಯಾರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

error: Content is protected !!
Scroll to Top