ದೀಪದ ಹತ್ತಿರ ಬರುವ ಕೊರೋನ ವೈರಸ್​ ಶಾಖದಿಂದ ಸಾಯುತ್ತದೆ!: ಬಿಜೆಪಿ ಶಾಸಕ ರಾಮದಾಸ್

ಮೈಸೂರು, ಎ.4: ದೀಪ ಹಚ್ಚುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ದೀಪ ಹಚ್ಚಿದರೆ ವೈರಸ್​ಗಳು ಆ ದೀಪದ ಬಳಿ ಬಂದು, ಶಾಖ ತಡೆಯಲಾರದೆ ಸಾಯುತ್ತವೆ ಎಂದು ಬಿಜೆಪಿ ಶಾಸಕ ಎಸ್​.ಎ. ರಾಮದಾಸ್ ಹೇಳಿದ್ದಾರೆ.

ಕೊರೋನ ವೈರಸ್ ದಾಳಿಯಿಂದ ತತ್ತರಿಸಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದೇಶದ ಜನರೆಲ್ಲರೂ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಏ. 5ಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್​ ಬೆಳಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಜನರಿಗೆ ಶಾಸಕ ರಾಮದಾಸ್ ಅವರು ಮೊಂಬತ್ತಿ ಮತ್ತು ಮಾಸ್ಕ್​ಗಳನ್ನು ವಿತರಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ಪ್ರಧಾನಿ ಮೋದಿ ದೀಪ ಹಚ್ಚಲು ಹೇಳಿರುವುದರ ಹಿಂದೆ ಕಾರಣವಿದೆ. ದೀಪ ಹಚ್ಚಿದ್ರೆ ವೈರಸ್​ಗಳು ದೀಪದ ಬಳಿ ಬರುತ್ತವೆ. ಆಗ ಅವು ದೀಪದ ಶಾಖಕ್ಕೆ ಸಾಯುತ್ತವೆ ಎಂದು ದೀಪದ ವಿಶೇಷತೆ ಕುರಿತು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.
ಕತ್ತಲಿನಲ್ಲಿ ದೀಪ ಹಚ್ಚಿದರೆ ವೈರಸ್​ಗಳು ಎಲ್ಲೇ ಇದ್ದರೂ ದೀಪದ ಬಳಿ ಬರುತ್ತವೆ. ಆಗ ದೀಪದ ಶಾಖಕ್ಕೆ ವೈರಸ್ ಸಾವನ್ನಪ್ಪುತ್ತವೆ. ನಮ್ಮ ಮನೆಯ ಒಳಗೆ ವೈರಸ್ ಇರಬಾರದು ಎಂದು ಮೋದಿ ಈ ಚಿಂತನೆ ಮಾಡಿದ್ದಾರೆ. ಹಾಗಾಗಿ ನಾಳೆ ರಾತ್ರಿ ಎಲ್ಲರೂ ದೀಪ ಹಚ್ಚಿ ಕೊರೋನಾ ವಿರುದ್ದದ ಹೋರಾಟಕ್ಕೆ ಕೈ ಜೊಡಿಸಿ ಎಂದು ಮೈಸೂರಿನಲ್ಲಿ ಶಾಸಕ ಎಸ್. ರಾಮದಾಸ್ ಮನವಿ ಮಾಡಿದ್ದಾರೆ.

Also Read  ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ

ರವಿವಾರ ದೀಪ ಬೆಳಗಿಸಲು ಪ್ರಧಾನಿ ಮೋದಿ ಕರೆ ನೀಡಿರುವುದರಿಂದ ಬಿಜೆಪಿ ಶಾಸಕ ಎಸ್​.ಎ. ರಾಮದಾಸ್ ಮೈಸೂರಿನ ದಸರಾ ವಸ್ತು ಪ್ರದರ್ಶನದ ಮಾರುಕಟ್ಟೆಯಲ್ಲಿ ಮೊಂಬತ್ತಿಗಳು ಮತ್ತು ಮಾಸ್ಕ್​ಗಳನ್ನು ವಿತರಣೆ ಮಾಡಿದ್ದಾರೆ. ಈ ವೇಳೆ ಮಾಸ್ಕ್​ಗಳನ್ನು ಪಡೆಯಲು ಜನ ಗುಂಪಾಗಿ ಬಂದು, ಮುಗಿಬಿದ್ದ ಘಟನೆಯೂ ನಡೆಯಿತು.

Also Read  Big Breaking News ➤ ಹಿಜಾಬ್ ನಿಷೇಧ ವಿರೋಧಿಸಿ ನಾಳೆ ಕರ್ನಾಟಕ ಬಂದ್...!!

error: Content is protected !!
Scroll to Top