ಕೊರೋನ ವೈರಸ್‌ಗೆ ಅಮೆರಿಕಾದಲ್ಲಿ ಒಂದೇ ದಿನ 1400 ಕ್ಕೂ ಅಧಿಕ ಸಾವು

ವಾಶಿಂಗ್ಟನ್, ಎ.4:  ಕೊರೋನ ವೈರಸ್ ಗೆ ಅಮೆರಿಕಾ ಸಂಪೂರ್ಣ ತತ್ತರಿಸಿ ಹೋಗಿದ್ದು, ಅಮೆರಿಕಾದಲ್ಲಿ 24 ಗಂಟೆಯಲ್ಲಿ 1,400ಕ್ಕೂ ಅಧಿಕ ಮಂದಿ ಸಾವನ್ನಪಿರುವ ಬಗ್ಗೆ ವರದಿಯಾಗಿದೆ.

ಚೀನಾದ ವುಹಾನ್‌ನಿಂದ ಪ್ರಾರಂಭವಾದ ಕೊರೋನ ವೈರಸ್ ಅಮೆರಿಕದಲ್ಲಿ ಹಾನಿಯನ್ನುಂಟು ಮಾಡುತ್ತಿದೆ. ಅಮೆರಿಕಾದಲ್ಲಿ ಕೊರೋನ ವೈರಸ್‌ ಸೋಂಕಿತರ ಸಂಖ್ಯೆ 3 ಲಕ್ಷಕ್ಕೇರಿದೆ. ವಿಶ್ವದಲ್ಲೇ ಸೋಂಕಿತರ ಸಂಖ್ಯೆ ಅಮೆರಿಕಾದಲ್ಲಿ ಹೆಚ್ಚಾಗ್ತಿದೆ. 24 ಗಂಟೆಗಳಲ್ಲಿ ಕೊರೋನ ವೈರಸ್‌ನಿಂದಾದ ಸಾವಿನಲ್ಲೂ ಅಮೆರಿಕಾ ದಾಖಲೆ ಬರೆದಿದೆ.

ಅಮೆರಿಕದಲ್ಲಿ ಕೊರೋನ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 7406 ಕ್ಕೆ ತಲುಪಿದೆ. ಅಮೆರಿಕದಲ್ಲಿ ಸುಮಾರು 12 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗಿದೆ. ವಿಶ್ವದಲ್ಲಿ 11 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. ಈವರೆಗೆ 59 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Also Read  ಅಣ್ಣ ಬಂದಿದ್ದಾನೆಂದು ಕರೆದುಕೊಂಡು ಬಂದು ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ

error: Content is protected !!
Scroll to Top