ಲಾಕ್‌ಡೌನ್ ಉಲ್ಲಂಘಿಸಿ ಸ್ನೇಹಿತರ ಜತೆ ಜಾಲಿರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

ಬೆಂಗಳೂರು, ಎ.4: ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಶನಿವಾರ ನಸುಕಿನಲ್ಲಿ ಅಪಘಾತಕ್ಕೀಡಾಗಿದೆ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್‌ಗೆ ಹೋಗುತ್ತಿದ್ದರು ಎನ್ನಲಾಗಿದೆ.

ಲಾಕ್‌ಡೌನ್ ಕಾರಣದಿಂದ ಅನೇಕ ಕಡೆ ವಾಹನ ಓಡಾಡಕ್ಕೆ ನಿರ್ಬಂಧ ವಿಧಿಸಲಾಗಿದೆ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲದೆ ವಾಹನಗಳನ್ನು ಹೊರಗೆ ತೆಗೆಯಬೇಡಿ ಎಂದು ಸೂಚಿಸಲಾಗಿದೆ. ತರಕಾರಿ, ದಿನಸಿಗಳನ್ನು ಖರೀದಿ ಮಾಡಲು ನಡೆದುಕೊಂಡೇ ಹೋಗುವಂತೆ ಹೇಳಲಾಗಿದೆ. ಆದರೂ ಜನರು ಕಾರಣಗಳಿಲ್ಲದೆಯೂ ವಾಹನಗಳಲ್ಲಿ ಓಡಾಡುತ್ತಿರುವುದು ಮುಂದುವರಿದಿದೆ.

ಆದರೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರು ಶುಕ್ರವಾರ ತಡ ರಾತ್ರಿ ಜಾಲಿ ರೈಡ್ ಮಾಡಿದ್ದರು ಎನ್ನಲಾಗಿದೆ. ಜಾಗ್ವಾರ್ ಕಾರ್‌ನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಬೆಂಗಳೂರಿನ ವಸಂತನಗರ ಫ್ಲೈಓವರ್‌ನ ಕೆಳಗಿನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ.
ಸೀಟ್ ಬೆಲ್ಟ್ ಹಾಕದೆ ಇದ್ದಿದ್ದರಿಂದ ಕಾರ್‌ನ ಏರ್‌ಬ್ಯಾಗ್ ಓಪನ್ ಆಗಿರಲಿಲ್ಲ. ಇದರಿಂದ ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಪೆಟ್ಟಾಗಿದೆ. ಶರ್ಮಿಳಾ ಅವರ ಸ್ನೇಹಿತನ ಕೈಗೆ ಗಾಯವಾಗಿದೆ. ಇಬ್ಬರಿಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಹಾಸನದಲ್ಲಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತ್ಯು ► ಸ್ಮಶಾನ ಮೌನವಾದ ಗಂಡಿಬಾಗಿಲು ಪರಿಸರ

error: Content is protected !!
Scroll to Top