ಜಿಲ್ಲೆಯಲ್ಲಿ ನಾಳೆಯೂ ದಿನಸಿ ಅಂಗಡಿಗಳು 12 ಗಂಟೆಯವರೆಗೆ ಓಪನ್ ➤ ಹಾಲು, ಮೆಡಿಕಲ್‌, ಗ್ಯಾಸ್, ಪೆಟ್ರೋಲ್, ಬ್ಯಾಂಕ್ ಎಂದಿನಂತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.01. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ತೆರೆಯಲಿವೆ.

ಹಾಲು, ಮೆಡಿಕಲ್‌, ಗ್ಯಾಸ್ ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಓಪನ್ ಇರಲಿದ್ದು, ಪೆಟ್ರೋಲ್ ಪಂಪ್ ನಲ್ಲಿ ಖಾಸಗಿ ವಾಹನಗಳಿಗೆ ಬೆಳಿಗ್ಗೆ 7 ರಿಂದ 12 ರವರೆಗೆ ಮಾತ್ರ ಸೇವೆ ಇರಲಿದೆ. ಗೂಡ್ಸ್ ವಾಹನಗಳಿಗೆ ಇಡೀ ದಿನ ಸೇವೆ ಇರಲಿದೆ.

error: Content is protected !!
Scroll to Top