ಮಂಗಳೂರು, ಎ.1: ನಾಗರಿಕರು ಸುರಕ್ಷತೆ ಹಾಗೂ ಆರೋಗ್ಯ ಖಚಿತಪಡಿಸಿಕೊಳ್ಳಲು ದೂರವಾಣಿ ಮೂಲಕ ವೈದ್ಯಕೀಯ ಸೇವೆ ನೀಡಲು ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂದೆ ಬಂದಿದೆ.
ಇದರಿಂದ ಆಸ್ಪತ್ರೆಗೆ ಅನಗತ್ಯವಾಗಿ ಬರುವ ರೋಗಿಗಳು ಮತ್ತು ಅವರ ಸಹಾಯಕರ ಪ್ರಯಾಣ ತಪ್ಪಿಸುವ ಉದ್ದೇಶದಿಂದಲೇ ಈ ವಿನೂತನ ಸೇವೆಯನ್ನು ಆರಂಭಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವವರಿಗೆ ದೂರವಾಣಿ ಮೂಲಕ ಆರಂಭಿಕ ಸಮಾಲೋಚನೆ ನೀಡಲು ವೈದ್ಯಕೀಯ ತಂಡ ಸಜ್ಜುಗೊಂಡಿದೆ.
ಲಾಕ್‌ಡೌನ್ ಜಾರಿಗೊಳಿಸಿರುವ ಸಂದಿಗ್ಧ ಸ್ಥಿತಿಯಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಇರುವುದು ಸುರಕ್ಷಿತ. ರೋಗಿಗಳು ಸಲಹೆ ಪಡೆದುಕೊಳ್ಳಬೇಕು. ವೈದ್ಯರು ಸೂಚಿಸಿದ್ದಲ್ಲಿ ಮಾತ್ರ ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಜಯಾನಂದ (7760953333) ಅವರನ್ನು ಸಂಪರ್ಕಿಸಲು ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.