ಇಂದಿನಿಂದಲೇ ಎರಡು ತಿಂಗಳ ಪಡಿತರ ವಿತರಣೆ

ಬೆಂಗಳೂರು, ಎ.1: ದೇಶಾದ್ಯಂತ ಕೊರೋನ ಸೋಂಕು ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಎಪ್ರಿಲ್ ಮತ್ತು ಮೇ ಎರಡೂ ತಿಂಗಳ ಪಡಿತರವನ್ನು ವಿತರಣೆಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು  ಸಚಿವ ಕೆ .ಗೋಪಾಲಯ್ಯ ಹೇಳಿದ್ದಾರೆ.

ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಎ.1ರಿಂದಲೆ ವಿತರಣೆಯಾಗಲಿದೆ. ಎಪ್ರಿಲ್ 10ರ ಒಳಗೆ ರಾಜ್ಯದ ಪಡಿತರ ವಿತರಣೆ ಪೂರ್ಣಗೊಳಿಸುವ ಗುರಿ‌ ಇದೆ ಎಂದರು.

ಕಡುಬಡವರ ಅಂತ್ಯೋದಯ ಕಾರ್ಡು ದಾರರಿಗೆ ಎರಡು ತಿಂಗಳ 70 ಕೆಜಿ ಅಕ್ಕಿ ದೊರೆಯಲಿದೆ. ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಯೂನಿಟ್ ಗೆ 5 ಕೆಜಿ ಅಕ್ಕಿ, ಪ್ರತಿ ಕಾರ್ಡಿಗೆ 2 ಕೆಜಿ ಗೋಧಿ ವಿತರಣೆಯಾಗಲಿದೆ ಇನ್ನು ಓಟಿಪಿ ವಿಚಾರ ಆಯಾ ಜಿಲ್ಲಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದು ಎಂದರು.

Also Read  ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ

ಎಪ್ರಿಲ್ 10ರ ನಂತರ ಕೇಂದ್ರ ಸರಕಾರದ ಪಡಿತರ ಪ್ಯಾಕೇಜ್ ವಿತರಣೆ ಶುರುವಾಗಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ‌ ಇಂದೇ ಪಡಿತರ ವಿತರಣೆ ಶುರುವಾಗಲಿದೆ. ಹಳ್ಳಿಗಳಲ್ಲಿ ವಿತರಣೆಗೆ ಎರಡು ದಿನ ಸಮಯ ಬೇಕಾಗಬಹುದು ಎಂದು ಸಚಿವರು ಹೇಳಿದರು.

error: Content is protected !!
Scroll to Top