ಹಾಸನ: ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ ► ದೇಹವನ್ನು ಬಿಟ್ಟು ರುಂಡವನ್ನು ಕೊಂಡೊಯ್ದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಹಾಸನ, ಆ.29. ಹಾಡುಹಗಲೇ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕಬ್ಬಿನ ಗದ್ದೆಯಲ್ಲಿ ಕೊಲೆ ಮಾಡಿ ದೇಹವನ್ನು ಅಲ್ಲೇ ಬಿಟ್ಟು ರುಂಡವನ್ನು ಕೊಂಡೊಯ್ದಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ ಸಮೀಪ ಕಾಳೇನಹಳ್ಳಿಯಲ್ಲಿ ನಡೆದಿದೆ.

ದುಷ್ಕರ್ಮಿಗಳಿಂದ ಹತ್ಯೆಯಾದ ಯುವಕನನ್ನು ಚನ್ನರಾಯಪಟ್ಟಣ ಕಾಳೆನಹಳ್ಳಿ ನಿವಾಸಿ ನವೀನ್ (27) ಎಂದು ಗುರುತಿಸಲಾಗಿದೆ. ಪೂರ್ವ ದ್ವೇಷದಿಂದಾಗಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಮೃತ ದೇಹವನ್ನು ನಗರದ ಜಿಲ್ಲಾ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ಒಳಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Also Read  ಕಡಬ ಸರಕಾರಿ ಪ.ಪೂ.ಕಾಲೇಜು ► ವಿವಿಧ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ

error: Content is protected !!
Scroll to Top