ಕಡಬದಲ್ಲಿ ಮಧ್ಯಾಹ್ನದವರೆಗೆ ತೆರೆಯಲಿದೆ ದಿನಸಿ, ತರಕಾರಿ ಅಂಗಡಿಗಳು ➤ ಜನರಲ್ಲಿ ಯಾವುದೇ ಗೊಂದಲ ಬೇಡ: ಎಸಿ ಡಾ| ಯತೀಶ್ ಉಳ್ಳಾಲ್

(ನ್ಯೂಸ್ ಕಡಬ) newskadaba.com ಕಡಬ, ಮಾ.31. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ದಿನಸಿ ಅಂಗಡಿ, ತರಕಾರಿ, ಹಾಲು ಮೊದಲಾದ ದಿನಬಳಕೆಯ ಸಾಮಾಗ್ರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕಡಬ ಪೇಟೆಯಲ್ಲೂ ನಾಳೆ ಅಂಗಡಿ ಮುಂಗಟ್ಟು ತೆರೆದಿರಲಿದೆ.

ಈಗಾಗಲೇ ಕಡಬ ಪಂಚಾಯತ್ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅದು ಹಾಗೆಯೇ ಮುಂದುವರಿಯಲಿದೆ. ಜೊತೆಗೆ ವಿವಿಧ ಗ್ರಾಮಗಳಿಂದ ದಿನಬಳಕೆಯ ವಸ್ತುಗಳಿಗೆ ಕಡಬಕ್ಕೆ ಆಗಮಿಸುವವರ ಅನುಕೂಲಕ್ಕಾಗಿ ಅಂಗಡಿಗಳನ್ನು ತೆರೆಯಬಹುದಾಗಿದೆ ಎಂದು ಪುತ್ತೂರು ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ‘ನ್ಯೂಸ್ ಕಡಬ’ಕ್ಕೆ ತಿಳಿಸಿದ್ದಾರೆ. ಅಲ್ಲದೆ ದಿನಬಳಕೆಯ ವಸ್ತುಗಳ ಹೋಂ ಡೆಲಿವರಿ ಸೌಲಭ್ಯವನ್ನು ನೀಡಲು ಮುಂದೆ ಬರುವ ವ್ಯಾಪಾರಸ್ತರಿಗೆ ತಾನೇ ಖುದ್ದಾಗಿ ಅವಕಾಶವನ್ನು ನೀಡುವುದಾಗಿಯೂ ತಿಳಿಸಿದ್ದಾರೆ.

Also Read  ತಾರಸಿ ತೋಟ ಮತ್ತು ಕೈತೋಟ ತರಬೇತಿ

error: Content is protected !!
Scroll to Top