ಕಡಬ ಪೇಟೆ ನಾಳೆ ಸಂಪೂರ್ಣ ಬಂದ್ ➤ ದಿನಸಿ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ

ಕಡಬ, ಮಾ.30. ದ.ಕ ಜಿಲ್ಲೆಯಲ್ಲಿ ಜಿಲ್ಲಾಡಳಿತ ಮಾ.31ರಂದು ಬೆಳಿಗ್ಗೆ 6 ಗಂಟೆಯಿಂದ 3 ಗಂಟೆಯವರೆಗೆ ದಿನಸಿ ಸಾಮಾಗ್ರಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೂ ಕಡಬ ಕೋಡಿಂಬಾಳ ಗ್ರಾಮದಲ್ಲಿ ಈ ಆದೇಶ ಅನ್ವಯವಾಗುವುದಿಲ್ಲ, ಈ ಬಗ್ಗೆ ಮಾ.29ರಂದು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ತಾಲೂಕು ಪಂಚಾಯತ್ ಕಾರ‍್ಯ ನಿರ್ವಾಹಣಾಧಿಕಾರಿ ನವೀನ್ ಭಂಡಾರಿ, ಕಡಬ ತಹಸೀಲ್ದಾರ್ ಜಾನ್‌ಪ್ರಕಾಶ್ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಾ.31ರಿಂದ ಕಡಬ ಹಾಗೂ ಕೋಡಿಂಬಾಳ ಗ್ರಾಮಗಳಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿರುತ್ತದೆ, ಗ್ರಾಮಸ್ಥರಿಗೆ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳು ವಾರ್ಡ್‌ವಾರು ಸದಸ್ಯರ ಪಂಚಾಯತ್ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಪಂಚಾಯತ್ ಸೂಚಿಸಿದ ಪ್ರದೇಶದಲ್ಲಿ ವಿತರಣೆಯಾಗಲಿದೆ ಎಂದು ಕಡಬ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ಲಾಕ್‌ಡೌನ್ ಅವಧಿ ಮುಗಿಯುವರೆಗೆ ಅಥವಾ ಮುಂದಿನ ಆದೇಶದವರೆಗೆ ಕಡಬ ಕೋಡಿಂಬಾಳ ಪ್ರದೇಶದಲ್ಲಿ ಜನರು ಪೇಟೆಗೆ ಬರಬಾರದೆಂದು ಕಠಿಣ ನಿರ್ಧಾರ ತೆಗೆದುಕೊಂಡಿರುವ ಅಧಿಕಾರಿಗಳ ಸಭೆಯಲ್ಲಿ ಪ್ರತಿ ವಾರ್ಡ್‌ಗಳಿಗೆ ಆಯಾ ವಾರ್ಡಿನ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಯನ್ನು ನೇಮಕಗೊಳಿಸಿದ್ದು ಪ್ರತಿ ವಾರ್ಡಿಗೆ ದಿನಸಿ ಅಂಗಡಿಯವರನ್ನು ನೇಮಕಗೊಳಿಸಿದೆ. ಗ್ರಾಮಸ್ಥರು ದಿನಸಿ ಸಾಮಾಗ್ರಿ ಬೇಕಾದರೆ ಪಂಚಾಯತ್ ಸಿಬ್ಬಂದಿ ಅಥವಾ ಆಯಾ ಪ್ರದೇಶಕ್ಕೆ ಸೂಚಿಸಿದ ಅಂಗಡಿ ಮಾಲಕರ ವ್ಯಾಟ್ಸಪ್‌ಗೆ (ವ್ಯಾಟ್ಸಪ್ ಇಲ್ಲದಿದ್ದರೆ ಪಂಚಾಯತ್ ಸಿಬ್ಬಂದಿ ಅಥವಾ ಅಂಗಡಿ ಮಾಲಕರಿಗೆ ದೂರವಾಣಿ ಮೂಲಕ ತಿಳಿಸಬೇಕಾಗುತ್ತದೆ) ತಮ್ಮ ದಿನಸಿ ಸಾಮಾಗ್ರಿಯ ಪಟ್ಟಿಯನ್ನು ಕಳುಹಿಸಿ ಕೊಡಬೇಕಾಗುತ್ತದೆ.

Also Read  ಮಂಗಳೂರು: ಎಸ್ಸೆಸ್ಸೆಲ್ಸಿ ಕೊನೆಯ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ಮೃತ್ಯು

ಸಾಮಾಗ್ರಿ ವಿತರಣೆಯು ಸೋಮವಾರ, ಬುಧವಾರ, ಶನಿವಾರ ನಡೆಯಲಿದ್ದು, ಗ್ರಾಮಸ್ಥರು ವಿತರಣೆಯ ಹಿಂದಿನ ದಿನ ಮಧ್ಯಾಹ್ನ 12ಗಂಟೆಯೊಳಗೆ ತಮಗೆ ಬೇಕಾದ ಕನಿಷ್ಠ ಸಾಮಾಗ್ರಿಯ ಪಟ್ಟಿಯನ್ನು ಸಲ್ಲಿಸಬೇಕು, ಪ್ರತಿಯೊಬ್ಬರು ಹೆಚ್ಚು ಸಾಮಾಗ್ರಿಯನ್ನು ಶೇಖರಣೆ ಮಾಡಬೇಕಿಲ್ಲ, ಅಲ್ಲದೆ ಸಾಮಾಗ್ರಿಯ ದರವನ್ನು ಸ್ಥಳದಲ್ಲಿಯೇ ಪಾವತಿಸಬೇಕಾಗುತ್ತದೆ, ಸಾಮಾಗ್ರಿಗೆ ಅಂಗಡಿಯವರು ಹೆಚ್ಚು ದರ ಪಡೆಯುವಂತಿಲ್ಲ, ಹೆಚ್ಚು ದರ ಪಡೆದಿರುವುದು ಅಥಾವ ಏನೇ ಸಮಸ್ಯೆಗಳಿದ್ದರೆ ಗ್ರಾಮ ಕರಣಿಕ ಹರೀಶ್ ಕುಮಾರ್, ಪಿಡಿಒ ಚೆನ್ನಪ್ಪ ಗೌಡ ಕಜೆಮೂಳೆ ಅವರನ್ನು ಸಂಪರ್ಕಿಸಬಹುದು.

ಮಾ.31ರಂದು ಸಾಮಾಗ್ರಿ ವಿತರಣೆ ಇದ್ದು ಗ್ರಾಮಸ್ಥರು ಸಾಮಾಗ್ರಿ ಪಟ್ಟಿಯನ್ನು ಕೂಡಲೇ ಈ ಕೆಳಗೆ ಪಟ್ಟಿಯಲ್ಲಿ ಸೂಚಿಸಲಾದ ಆಯಾ ಪ್ರದೇಶದ ಅಂಗಡಿಯ ಮಾಲಕರಿಗೆ ಅಥವಾ ಪಂಚಾಯತ್ ಸಿಬ್ಬಂದಿಗೆ ದೂರವಾಣಿ ಮೂಲಕ ತಿಳಿಸುವಂತೆ ಕೊರಲಾಗಿದೆ. ಈ ನಿಯಮ ಈಗಾಗಲೇ ಜಾರಿಗೆ ಮಾಡಲಾಗಿರುವುದರಿಂದ ಮಾ.31ರ ವಿತರಣೆಯಲ್ಲಿ ಸ್ವಲ್ಪ ವ್ಯತ್ಯಯ ಆದರೂ ಗ್ರಾಮಸ್ಥರು ಗೊಂದಲಪಡಬೇಕಿಲ್ಲ ಎಂದು ಪಿಡಿಒರವರು ತಿಳಿಸಿದ್ದಾರೆ.

Also Read  ದನದ ಹಟ್ಟಿಗೆ ಚಿರತೆ ದಾಳಿ- ಸಾಕುನಾಯಿಯ ಬೊಬ್ಬೆಗೆ ಎಚ್ಚೆತ್ತ ಜನ ➤ ಹಸು ಪ್ರಾಣಾಪಾಯದಿಂದ ಪಾರು

ಚೆನ್ನಪ್ಪ ಗೌಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಡಬ ಗ್ರಾ.ಪಂ. ಫೋನ್: 9480862354

ಹರೀಶ್ ಕುಮಾರ್, ಗ್ರಾಮಲೆಕ್ಕಾಧಿಕಾರಿ (ವಿಎ) ಫೋನ್: 9972405766

error: Content is protected !!
Scroll to Top