ಕೊರೋನಾ ಪರಿಹಾರ ನಿಧಿಗೆ ಸರಕಾರಿ ನೌಕರರ ಒಂದು ದಿನದ ವೇತನ ಘೋಷಣೆ ➤ ಮಾಹಿತಿ ನೀಡದೆ ಘೋಷಿಸಿದ್ದಕ್ಕೆ ಸರಕಾರಿ ನೌಕರರಲ್ಲಿ ಅಪಸ್ವರ

(ನ್ಯೂಸ್ ಕಡಬ) newskadaba.com ಕಡಬ, ಮಾ.29. ಕಣ್ಣಿಗೆ ಕಾಣದ ಕೊರೋನಾ ವೈರಸ್ ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯೊಳಗೆ ಅದುಮಿರುವ ಸಂದರ್ಭದಲ್ಲಿ ರಾಜ್ಯ ಸರಕಾರವು ದಾನಿಗಳಿಂದ ನೆರವು ಯಾಚಿಸಿದ್ದು, ಸರಕಾರದ ಮನವಿಗೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರು ಒಂದು ದಿನದ ವೇತನವನ್ನು ಕೊರೋನಾ ಪರಿಹಾರಕ್ಕೆ ನೀಡುವುದಾಗಿ ಘೋಷಣೆ ಮಾಡಿರುವುದಕ್ಕೆ ಇದೀಗ ನೌಕರರಲ್ಲೇ ಅಪಸ್ವರ ಎದ್ದಂತಿದೆ.

ಸರಕಾರಿ‌ ನೌಕರರ ಸಂಘದ ಅಧ್ಯಕ್ಷರು ನೌಕರರಲ್ಲಿ ಯಾವುದೇ ಮಾತುಕತೆ ನಡೆಸದೆ ಏಕಾಏಕಿ ಒಂದು ದಿನದ ವೇತನವನ್ನು ನೀಡುವ ತೀರ್ಮಾನ ಕೈಗೊಂಡಿರುವುದರ ಬಗ್ಗೆ ಸರಕಾರಿ ನೌಕರರ ಅಧಿಕೃತ ವಾಟ್ಸ್ಅಪ್ ಗ್ರೂಪ್‌ನಲ್ಲಿ ಪರ – ವಿರೋಧ ಚರ್ಚೆಗಳು ನಡೆಯುತ್ತಿದೆ. ಅಗತ್ಯ ಸಂದರ್ಭಗಳಲ್ಲಿ ನಮ್ಮ ಸಹಾಯಕ್ಕೆ ಬಾರದವರು ಯಾವುದೇ ಮಾಹಿತೊ ನೀಡದೆ ಒಂದು ದಿನದ ವೇತನವನ್ನು ಕೊರೋನಾ ಪರಿಹಾರಕ್ಕಾಗಿ ನೀಡುವುದಾಗಿ ಹೇಳಿರುವುದಕ್ಕೆ ನಮ್ಮ ಆಕ್ರೋಶವಿದೆ ಎಂದೆಲ್ಲಾ ಸಂದೇಶಗಳು ಚರ್ಚೆಯಾಗಿವೆ.

Also Read  ಇಂದಿನ ಕೊರೋನಾ ಅಪ್ಡೇಟ್ಸ್ ➤ ಕಡಬ ತಾಲೂಕಿನ 15 ಮಂದಿಯಲ್ಲಿ ಕೊರೋನಾ ದೃಢ

error: Content is protected !!
Scroll to Top