ಕಡಬ: ಅಪರಿಚಿತ ವಾಹನ ಢಿಕ್ಕಿಯಾಗಿ ನರಿ ಸಾವು ➤ ಸತ್ತ ನರಿಯನ್ನು ಸ್ವತಃ ಮೇಲೆತ್ತಿದ ಕಡಬ ಎಸ್ಐ ರುಕ್ಮ‌ನಾಯ್ಕ್



(ನ್ಯೂಸ್ ಕಡಬ) newskadaba.com ಕಡಬ, ಮಾ.29. ನರಿಯೊಂದು ಯಾವುದೋ ವಾಹನದ ಅಡಿಗೆ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ಡಿಪೋ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.





ಅಪರಿಚಿತ ವಾಹನ ಢಿಕ್ಕಿ ಹೊಡೆದು ಮೃತಪಟ್ಟು ರಸ್ತೆ ಮಧ್ಯದಲ್ಲಿ ಬಿದ್ದಿದ್ದ ನರಿಯನ್ನು ಭಾನುವಾರ ಬೆಳಗ್ಗೆ ರೌಂಡ್ಸ್ ಗೆ ತೆರಳುತ್ತಿದ್ದ ಕಡಬ ಠಾಣಾ ಎಸ್ಐ ರುಕ್ಮ‌ನಾಯ್ಕ್ ಹಾಗೂ ಸಿಬ್ಬಂದಿ ಭವಿತ್ ಗಮನಿಸಿದ್ದು, ಈ ವೇಳೆ ಎಸ್ಐ ರುಕ್ಮ‌ನಾಯ್ಕ್ ಸ್ವತಃ ಕೈಯಾರೆ ನರಿಯನ್ನು ಎತ್ತಿ ರಸ್ತೆಯ ಪಕ್ಕದಲ್ಲಿರಿಸಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮಹಜರು ನಡೆಸಲಿದ್ದಾರೆ.






error: Content is protected !!
Scroll to Top