ಹಾಲಿಗೂ ತಟ್ಟಿದ ಕೊರೋನಾ ಬಿಸಿ ➤ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಹಾಲು ಡಿಪೋ ಬಂದ್

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.28. ಕೊರೋನಾ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಘೋಷಿಸಿರುವುದರಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಮಾರ್ಚ್ 29 ಮತ್ತು ಮಾರ್ಚ್ 30 ರಂದು ಬೆಳಿಗ್ಗೆ ಹಾಗೂ ಸಾಯಂಕಾಲದ ಸರದಿಗಳಲ್ಲಿ ಉತ್ಪಾದಕರಿಂದ ಹಾಲು ಖರೀದಿಸುವುದನ್ನು ಸ‍್ಥಗಿತಗೊಳಿಸಿದೆ.

ಎರಡೂ ದಿನಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಯಥಾಸ್ಥಿತಿಯಲ್ಲಿ ಮುಂದುವರೆಯಲಿದ್ದು, ಗ್ರಾಹಕರು ಸಹಕರಿಸುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ರವಿರಾಜ ಹೆಗ್ಡೆ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ಕಾಮಗಾರಿ ವೀಕ್ಷಿಸುತ್ತಿದ್ದ ಸಂದರ್ಭ ಆಕಸ್ಮಾತ್ ಗುಡ್ಡ ಕುಸಿತ ➤ ಕೂದಲೆಳೆಯ ಅಂತರದಿಂದ ಪಾರಾದ ಸಚಿವ ಜಗದೀಶ್ ಶೆಟ್ಟರ್...!

error: Content is protected !!
Scroll to Top