ಮಂಗಳೂರು, ಮಾ.28: ವ್ಯಾಪಕವಾಗಿ ಹರಡುವ COVID-19 ಸೋಂಕು ಮೂರನೇ ಹಂತಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಘೋಷಣೆಯಾಗಿರುವುದರಿಂದ ಜನರಿಗೆ ಎಂದಿನಂತೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕೆಸಿಸಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆನ್ಲೈನ್ ಚಿಕಿತ್ಸಾ ಸೇವೆ ಆರಂಭಿಸಿದೆ.
ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ, ಗುಜರಾತಿ ಸಹಿತ ಎಲ್ಲಾ ಸ್ಥಳೀಯ ಭಾಷೆಯ ಜನರಿಗೆ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದ್ದು, ಟ್ರಸ್ಟ್‌ನ ಸುಮಾರು 14 ವಿಭಾಗಗಳ ವೈದ್ಯರುಗಳು ಈ ಸೇವೆಯಲ್ಲಿ ಲಭ್ಯವಿರಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. ಅಲ್ಲದೆ ಅವಶ್ಯಕತೆ ಇದ್ದಲ್ಲಿ ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಟ್ರಸ್ಟ್ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದು, ಅಗತ್ಯವಿರುವವರ ಮನೆಗೆ ಭೇಟಿ ನೀಡಿ ರಕ್ತಪರೀಕ್ಷೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಸೇವೆಯ ಅಗತ್ಯವಿರುವವರು ಈ ಕೆಳಗೆ ನೀಡುವ ವಾಟ್ಸ್‌ಆ್ಯಪ್ ನಂಬರ್‌ಗೆ ತಮ್ಮ ಹೆಸರು, ವಯಸ್ಸು, ರೋಗಲಕ್ಷಣಗಳು, ಯಾವುದಾದರೂ ಮಾತ್ರೆಯನ್ನು ಸೇವಿಸುತ್ತಿದ್ದರೆ ಅದರ ಮಾಹಿತಿ, ಯಾವುದಾದರೂ ಹಳೆಯ ರಿಪೋರ್ಟ್‌ಗಳಿದ್ದಲ್ಲಿ ಅವುಗಳ ಸಹಿತ ವಾಯ್ಸ್ ಅಥವಾ ಟೆಕ್ಸ್ಟ್ ಮೂಲಕ ಸಂದೇಶ ಕಳುಹಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಅಗತ್ಯವಿದ್ದರೆ ರೋಗಿಗೆ ವೈದ್ಯರು ನೇರವಾಗಿ ಕರೆಮಾಡಿ ಚಿಕಿತ್ಸೆ ತಿಳಿಸುವರು ಎಂದು ಪ್ರಕಟನೆ ತಿಳಿಸಿದೆ.
ವಾಟ್ಸ್‌ಆ್ಯಪ್ ಮಾಡಬೇಕಾದ ಸಂಖ್ಯೆ: 08884333630, 096136 32020, 09745154155
- ಚಿಕಿತ್ಸಾ ವಿಭಾಗಗಳು:
- ಜನರಲ್ ಮೆಡಿಸಿನ್
- ಜನರಲ್ ಸರ್ಜರಿ
- ಇನ್‌ಟಿ
- ಸೈಕಿಯಾಟ್ರಿ
- ಆರ್ಥೋಪಿಡಿಕ್ಸ್
- ಪಿಡಿಯಾಟ್ರಿಕ್ಸ್
- ಪಿಡಿಯಾಟ್ರಿಕ್ ಸರ್ಜರಿ
- ನ್ಯೂರೋಲಜಿ
- ಕಾರ್ಡಿಯಾಲಜಿ ಕಾರ್ಡಿಯೊತೊರಸಿಕ್ಸ
- ಸರ್ಜರಿ ನೆಫ್ರೋಲಜಿ
- ಅಫ್ಠಲ್ಮೋಲಜಿ
- ಶ್ವಾಸಕೋಶ ವಿಭಾಗ
- ಹೆರಿಗೆ