ಹಾಲು ಡೈರಿ, ಆಸ್ಪತ್ರೆ ಬಿಟ್ಟು ಮಿಕ್ಕಿದ್ದೆಲ್ಲಾ ಬಂದ್ ➤ ಬೆಳ್ಳಂಬೆಳಗ್ಗೆ ಪೇಟೆಗೆ ಬಂದವರಿಗೆ ಕಡಬ ಪೊಲೀಸರಿಂದ ತರಾಟೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.28. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದ್ದು, ಯಾರೂ ಪೇಟೆಗೆ ಕಾಲಿಡದಂತೆ ಪೊಲೀಸರು ತಡೆಯುತ್ತಿದ್ದಾರೆ.

ಆಸ್ಪತ್ರೆ, ಹಾಲು ಡೈರಿಯನ್ನು ಬಿಟ್ಟು ಉಳಿದೆಲ್ಲಾ ಸೇವೆಗಳನ್ನು ನಿಲ್ಲಿಸಲಾಗಿದ್ದು, ಅನಗತ್ಯವಾಗಿ ಕಡಬ ಪೇಟೆಗೆ ಆಗಮಿಸಿದ್ದವರನ್ನು ತರಾಟೆಗೆ ತೆಗೆದುಕೊಂಡ ಕಡಬ ಪೊಲೀಸರು ಹಿಂದಕ್ಕೆ ಕಳುಹಿಸುವುದು ಕಂಡುಬಂತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸಂಪೂರ್ಣ ಬಂದ್ ಮಾಡಲಾಗಿರುವುದರಿಂದ ಯಾರೂ ಮನೆಯಿಂದ ಹೊರಬಾರದೆ ಸಂಯಮ ಪಾಲಿಸಬೇಕು. ರಸ್ತೆಯಲ್ಲಿ ತಿರುಗಾಡುವುದು ಕಂಡುಬಂದರೆ ಕಾನೂನು ಕ್ರಮ‌ ಕೈಗೊಳ್ಳುವುದಾಗಿ ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ರುಕ್ಮಯ ನಾಯ್ಕ್ ಎಚ್ಚರಿಕೆ ನೀಡಿದ್ದಾರೆ.

Also Read  ವಿಟ್ಲ: ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ದುರ್ಮರಣ

error: Content is protected !!
Scroll to Top