ದಾವಣಗೆರೆಯ ಯುವಕನಲ್ಲಿ ಕೊರೋನ ಸೋಂಕು ದೃಢ

  • ರಾಜ್ಯದಲ್ಲಿ 63ಕ್ಕೇರಿದ ಸೋಂಕಿತರ ಸಂಖ್ಯೆ

ದಾವಣಗೆರೆ, ಮಾ.27: ಜಿಲ್ಲೆಯ ವ್ಯಕ್ತಿಯೋರ್ವನಿಗೆ ಕೊರೋನ ಸೋಂಕು ತಗಲಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ. ಇದರೊಂದಿಗೆ ಇಂದು ರಾಜ್ಯದಲ್ಲಿ ಎಂಟನೇ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 63ಕ್ಕೇರಿದೆ.

ಫ್ರಾನ್ಸ್‌ನಿಂದ ಮಾ. 17ರಿಂದ ಹೊರಟು ಅಬುಧಾಬಿ ಮೂಲಕ ಬೆಂಗಳೂರಿಗೆ ಬಂದಿದ್ದ 24 ಯುವಕ ಮಾರ್ಚ್ 18 ರಂದು ದಾವಣಗೆರೆಗೆ ಆಗಮಿಸಿದ್ದರು. ಮಾರ್ಚ್ 25ರಂದು ಕೆಮ್ಮು, ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

Also Read  ಬಿಳಿನೆಲೆ: ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನಾಚರಣೆ

ಈತನ ಪರೀಕ್ಷಾ ವರದಿ ಮಾರ್ಚ್ 26ರಂದು ಪಾಸಿಟಿವ್ ಎಂದು ದೃಢಪಟ್ಟಿತ್ತು. ಪೂನಾದ ಪ್ರಯೋಗಾಲಯ ಸಹ ಇದನ್ನು ದೃಢಪಡಿಸಿದೆ ಎಂದು ಅವರು ತಿಳಿಸಿದರು.

error: Content is protected !!
Scroll to Top