ಬಂಟ್ವಾಳ: ಸ್ನಾನಕ್ಕೆಂದು ಹೋದ ಯುವಕ ನೀರುಪಾಲು

ಬಂಟ್ವಾಳ, ಮಾ.27: ಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ಹೋಗಿದ್ದ ಯುವಕ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಮಾಣಿಯಲ್ಲಿ ನಡೆದಿದೆ. ಮೃತ ಯುವಕನನ್ನು ಪಾಲ್ಕೆ ನಿವಾಸಿ ರಹೀಂ (29) ಎಂದು ಗುರುತಿಸಲಾಗಿದೆ.

ನೇತ್ರಾವತಿ ನದಿಯ ದಡಕ್ಕೆ ಸ್ನಾನ ಮಾಡಲೆಂದು ಸ್ನೇಹಿತರೊಂದಿಗೆ ರಹೀಂ ತೆರಳಿದ್ದು ಮೂವರು ಸ್ನೇಹಿತರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ರಹೀಂ ಕೂಡಾ ನೀರಿಗೆ ಇಳಿದಿದ್ದು ನೀರಿನಲ್ಲಿ ಮುಳುಗಿ ಕಾಪಾಡುವಂತೆ ಕೂಗಿದ್ದಾರೆ.

ಆದರೆ ಉಳಿದ ಸ್ನೇಹಿತರು ಯಾರಿಗೂ ಆಳವಾದ ನೀರಿನ ಈಜಲು ತಿಳಿಯದ ಕಾರಣದಿಂದಾಗಿ ಅವರನ್ನು ಉಳಿಸಲಾಗಲಿಲ್ಲ. ಸ್ಥಳಕ್ಕೆ ರಕ್ಷಣಾ ತಂಡ ಮತ್ತು ಪೊಲೀಸರು ಆಗಮಿಸಿ ಮೃತದೇಹವನ್ನು ಹುಡುಕುತ್ತಿದ್ದಾರೆ.

Also Read  ಪರಿಸರ ಅಸಮತೋಲನವನ್ನು ತಪ್ಪಿಸೋಣ- ಡಾ ಚೂಂತಾರು; ಪಣಂಬೂರು ಘಟಕದಲ್ಲಿ ವನಮಹೋತ್ಸವ ಆಚರಣೆ

error: Content is protected !!
Scroll to Top