ಚಿಕ್ಕಬಳ್ಳಾಪುರ: ಶಂಕಿತ ಕೊರೋನ ಸೋಂಕಿನಿಂದ ವೃದ್ಧೆ ಮೃತ್ಯು

ಚಿಕ್ಕಬಳ್ಳಾಪುರ, ಮಾ.25: ಶಂಕಿತ ಕೊರೋನ ಸೋಂಕಿನಿಂದ ವೃದ್ಧೆ ಮೃತಪಟ್ಟ ಘಟನೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ನಡೆದಿದೆ.

ಗೌರಿಬಿದನೂರಿನ 70 ವರ್ಷದ ವೃದ್ದೆ ಇತ್ತೀಚೆಗೆ ಮಕ್ಕಾದಿಂದ ಹಿಂದಿರುಗಿ ಕ್ವಾರಂಟೈನ್‌ನಲ್ಲಿ ಇದ್ದರು. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಒಂದೇ ಕುಟುಂಬದ ಮೂವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ನಡುವೆ ಹೋಮ್ ಕ್ವಾರೆಂಟೈನ್ ನಲ್ಲಿದ್ದ ಮಹಿಳೆ ಸಾವನ್ನಪ್ಪಿರುವುದು ಕಳವಳಕ್ಕೆ ಕಾರಣವಾಗಿದೆ.

ಮಂಗಳವಾರ ರಾತ್ರಿ ಈ ವೃದ್ಧೆಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೃದ್ಧೆಯ ಆರೋಗ್ಯ ಬಿಗಡಾಯಿಸಿದ ಕಾರಣ ಅವರನ್ನು ತಕ್ಷಣವೇ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿ ಇಂದು ಮೃತಪಟ್ಟಿದ್ದಾರೆ.

Also Read  ಬನ್ನೇರುಘಟ್ಟ ಪಾರ್ಕ್ ಆನೆ ಮರಿಗೆ "ಸುಧಾಮೂರ್ತಿ" ಹೆಸರು ನಾಮಕರಣದ ಮೂಲಕ ಗೌರವ

ಈ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಅವರನ್ನು ನಿನ್ನೆ ಬೌರಿಂಗ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಈ ಮಹಿಳೆ ಇಂದು ರಾತ್ರಿ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

ಈ ಮಹಿಳೆ ಮಧುಮೇಹ, ಎದೆನೋವು, ಹಾಗೂ ಪೃಷ್ಠಭಾಗದ ಮುರಿತದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮಹಿಳೆಯ ಸಾವಿಗೆ ಕೋವಿಡ್ 19 ಸೋಂಕು ಕಾರಣವೇ ಎಂಬುದು ಪರೀಕ್ಷಾ ವರದಿಗಳ ಬಳಿಕವೇ ಖಚಿತವಾಗಬೇಕಿದ ಎಂಬ ಮಾಹಿತಿಯನ್ನೂ ಸಹ ಸಚಿವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.

ಇವರ ಗಂಟಲು ದ್ರವದ ಮಾದರಿಯನ್ನು ಈಗಾಗಲೇ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು ಮತ್ತು ಇದರ ವರದಿ ಇನ್ನಷ್ಟೇ ಕೈಸೇರಬೇಕಾಗಿದೆ. ಈ ನಡುವೆ ವೃದ್ಧೆ ಮೃತಪಟ್ಟಿರುವುದರಿಂದ ಕೋವಿಡ್ 19 ಸೋಂಕಿನಿಂದಲೇ ಈ ಸಾವು ಸಂಭವಿಸಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ.

Also Read  ಹುಣ್ಣಿಮೆಯ ದಿನ ಈ ರೀತಿ ಮಾಡಿದರೆ ನಿಮ್ಮ ಪ್ರೇಮ ಸಫಲವಾಗುತ್ತದೆ

error: Content is protected !!
Scroll to Top