ಉಡುಪಿ: ಪ್ರಥಮ ಕೊರೋನ ಪಾಸಿಟಿವ್ ಪತ್ತೆ

  • ದುಬೈಯಿಂದ ಬಂದ ವ್ಯಕ್ತಿಗೆ ಕೊರೋನ ಸೋಂಕು ದೃಢ

ಉಡುಪಿ, ಮಾ.25: ಕೊರೋನ ವೈರಸ್ ಸೋಂಕು ಉಡುಪಿಗೂ ಕಾಲಿಟ್ಟಿದೆ. 34 ವರ್ಷದ ವ್ಯಕ್ತಿ ಮಾರ್ಚ್ 18 ರಂದು ದುಬೈನಿಂದ ಉಡುಪಿಗೆ ಬಂದಿದ್ದು ಜ್ವರದ ಕಾರಣ ಮಾರ್ಚ್ 23 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಯಲ್ಲಿ ಕೊರೋನ ಇರುವುದು ತಿಳಿದು ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

 

error: Content is protected !!
Scroll to Top