ಹೊಸ ವರ್ಷದ ದ್ವಾದಶ ರಾಶಿ ಫಲವನ್ನು ತಿಳಿಯೋಣ.

ಯುಗಾದಿ ಹಬ್ಬದ ಶುಭಾಶಯಗಳು.
ಶಾರ್ವರಿ ನಾಮ ಸಂವತ್ಸರದ ಭವಿಷ್ಯದ ಫಲಗಳನ್ನು ತಿಳಿಯೋಣ.
ಎಲ್ಲರಿಗೂ ಭಗವಂತನ ದಯೆಯಿಂದ ಸಮಸ್ಯೆಗಳಿಂದ ಪಾರಾಗಿ ಒಳ್ಳೆಯದಾಗಲಿ ಎಂಬುದಾಗಿ ಪ್ರಾರ್ಥಿಸೋಣ.

ಮೇಷ ರಾಶಿ
ಕೆಲವು ವಾರ್ತೆಗಳು ನಿಮಗೆ ಹೆಚ್ಚಾಗಿ ನೋವು ತರಬಹುದು. ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಿಲ್ಲ. ಕಾರ್ಯಗಳ ನಿಮಿತ್ತ ಓಡಾಟ ಹೆಚ್ಚಾಗಿ ಕಾಣಬಹುದು. ಹಣಕಾಸಿನ ಸಮಸ್ಯೆ ನಿಮಗೆ ಹೆಚ್ಚಾಗಿ ಕಂಡುಬರುವುದು. ಆರೋಗ್ಯದಲ್ಲಿ ಜಾಗ್ರತೆ ಇರತಕ್ಕದ್ದು. ಶತ್ರು ಪೀಡೆಗಳಿಂದ ತೊಂದರೆ. ರಿಯಲ್ ಎಸ್ಟೇಟ್ ಅಥವಾ ಜಮೀನು ವಿಷಯಗಳಲ್ಲಿ ಉತ್ತಮ ಪ್ರಗತಿ ಕಾಣಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150

ವೃಷಭ ರಾಶಿ
ಮಧ್ಯಮ ಫಲಗಳನ್ನು ನಿರೀಕ್ಷಿಸಬಹುದಾಗಿದೆ. ಆರ್ಥಿಕ ವ್ಯವಹಾರಗಳು ಸುಧಾರಣೆಯಿಂದ ಕೂಡಿದ್ದು ಶುಭಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಸರ್ಕಾರಿ ನೌಕರರಿಗೆ ಉತ್ತಮ ಪ್ರಗತಿ ಕಂಡುಬರುತ್ತದೆ. ಕೆಲವು ವಿಷಯಗಳು ಮಾನಸಿಕ ಉದ್ವೇಗದಿಂದ ಕೂಡಿರುತ್ತದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ನಿಗಾ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150

ಮಿಥುನ ರಾಶಿ
ನಂಬಿದಲ್ಲಿ ಮೋಸ ಹೋಗುವ ಪರಿಸ್ಥಿತಿ ಬರಬಹುದು. ಮದುವೆ ವಿಷಯದಲ್ಲಿ ಹಿನ್ನಡೆಯನ್ನು ವಹಿಸುವರು. ಕೊಟ್ಟಿರುವ ಹಣ ಅಥವಾ ತೆಗೆದುಕೊಂಡಿರುವ ಹಣ ಸಾಕಷ್ಟು ಭಾದೆ ನೀಡುವುದು. ಸಿನಿಮಾ, ಕಲೆ ಕ್ಷೇತ್ರಗಳಲ್ಲಿ ಉತ್ತಮವಾದ ಅಭಿವೃದ್ಧಿ ಕಂಡು ಬರುತ್ತದೆ. ಈ ವರ್ಷಾಂತ್ಯದಲ್ಲಿ ಗೃಹ ನಿರ್ಮಾಣದ ಕನಸು ನನಸಾಗುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150

ಕರ್ಕಾಟಕ ರಾಶಿ
ಯಶಸ್ಸು ಮತ್ತು ಗೌರವ ಸಿಗಲಿದೆ. ಅನಗತ್ಯ ತೊಂದರೆ ನೀಡುವ ಜನಗಳು ಸುಮ್ಮನಾಗುವರು. ಚಿನ್ನಾಭರಣ ಖರೀದಿ ಪ್ರಕ್ರಿಯೆ ನಡೆಯಲಿದೆ. ಹಳೆಯ ಬಾಕಿಗಳು ಸರಾಗವಾಗಿ ಪಡೆದುಕೊಳ್ಳುವಿರಿ. ಕೆಲವೊಮ್ಮೆ ಹೆಚ್ಚಿನ ಖರ್ಚು ಗಳಿಂದ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಚ್ಚರ. ಕೆಲಸದ ಮುನ್ನ ಆದಷ್ಟು ಆಲೋಚಿಸಿ ಮುನ್ನಡೆಯುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150

Also Read  ಫೋನ್ ಬಿಟ್ಟಿರಲು ಆಗಲ್ವಾ? ಹಾಗಾದ್ರೆ ನಿಮಗೂ ನೋಮೋಫೋಬಿಯಾ ಇರಬಹುದು!

ಸಿಂಹ ರಾಶಿ
ಬಂಡವಾಳದ ಸಮಸ್ಯೆ ಹೆಚ್ಚಾಗಿ ಕಾಣಬಹುದು. ಮೂರನೇ ವ್ಯಕ್ತಿಗಳಿಂದ ಸಂಕಷ್ಟಕ್ಕೆ ಸಿಲುಕುವಿರಿ. ಆರೋಗ್ಯದಲ್ಲಿ ಏರಿಳಿತ ಕಂಡು ಬರುತ್ತದೆ. ವ್ಯವಹಾರಿಕ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು. ಕೆಲಸ ಅಥವಾ ಸ್ಥಳ ಬದಲಾವಣೆಗೆ ಉತ್ತಮ ಅವಕಾಶಗಳು ಸಿಗಲಿದೆ. ಸರ್ಕಾರಿ ನೌಕರಿಯ ಅಪೇಕ್ಷೆಗಳಿಗೆ ಉತ್ತಮ ಫಲ ಕಾಣಬಹುದಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150

ಕನ್ಯಾ ರಾಶಿ
ಮಧ್ಯಮ ಫಲಗಳಿಂದ ಕೂಡಿದ್ದು. ಆರೋಗ್ಯ ವಿಷಯದಲ್ಲಿ ಸುಧಾರಣೆಯಾಗಲಿದೆ. ಅಂದುಕೊಂಡ ಕೆಲಸಗಳು ನೆರವೇರುವುದು. ವ್ಯವಹಾರದಲ್ಲಿ ಪ್ರಗತಿಯ ಕ್ಷಣಗಳು ನಿಮ್ಮದಾಗಿದೆ. ಹೊಸ ಪರಿಚಯದ ವ್ಯಕ್ತಿಗಳಿಂದ ಸಹಾಯ-ಸಹಕಾರ ನಿರೀಕ್ಷಿಸಬಹುದು. ಆತ್ಮೀಯರು ದೂರ ಹೋಗುವ ಸಾಧ್ಯತೆ. ಮನೆ ಬದಲಾವಣೆಯ ಚಿಂತೆ ಮಾಡುವಿರಿ. ಕೆಲಸದ ನಿಮಿತ್ತ ಅನಗತ್ಯ ತಿರುಗಾಟ.
ಜ್ಯೋತಿಷ್ಯರು ಗಿರಿಧರ ಭಟ್
9945410150

ತುಲಾ ರಾಶಿ
ನಿಮ್ಮ ನಿರೀಕ್ಷಿತ ಕಾರ್ಯಗಳು ಕುಂಠಿತಗೊಳ್ಳಬಹುದು. ಮಾನಸಿಕ ವಾದಂತಹ ಸಮಸ್ಯೆಗಳನ್ನು ಅನುಭವಿಸುವಿರಿ. ಮೂರನೇ ವ್ಯಕ್ತಿಗಳಿಂದ ಹಣಕಾಸಿನ ಸಮಸ್ಯೆ ಹೆಚ್ಚಾಗಲಿದೆ. ಆಲಸ್ಯತನ ನಿಮಗೆ ಹೆಚ್ಚಾಗಿ ಸಮಸ್ಯೆ ಕೊಡಬಹುದು. ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳು ಉತ್ತಮವಾಗಿ ನಡೆಯಲಿದೆ. ನವೀನ ವಸ್ತುಗಳ ಖರೀದಿಗೆ ಮುಂದಾಗುವರು. ವೈವಾಹಿಕ ಜೀವನದಲ್ಲಿ ನೆಮ್ಮದಿ ಸಂತೃಪ್ತಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150

ವೃಶ್ಚಿಕ ರಾಶಿ
ಹೂಡಿಕೆಗಳಲ್ಲಿ ಯೋಚನೆ ಮಾಡಿ ಪಾಲ್ಗೊಳ್ಳಿ. ಮಧ್ಯವರ್ತಿಗಳಿಂದ ಸಮಸ್ಯೆ ಆಗಬಹುದು ಎಚ್ಚರ. ಕೆಲವು ಘಟನೆಗಳು ಮಾನಸಿಕ ಅಸ್ಥಿರತೆ ತಂದುಕೊಡುತ್ತದೆ. ಜಾಗ ಜಮೀನು ಮಾರಾಟ ಮಾಡಲು ಹಲವು ದಿನಗಳಿಂದ ಪ್ರಯತ್ನಪಡುತ್ತಿರುವುದು ಯಶಸ್ಸು ಸಿಗಲಿದೆ. ಅನಾರೋಗ್ಯದ ಸಮಸ್ಯೆಗೆ ಪರಿಹಾರ ಸಿಗಲಿದೆ. ಆಸ್ತಿ ಹಣಕಾಸಿನ ವ್ಯಾಜ್ಯಗಳು ಪರಿಹಾರ ಗೊಳ್ಳುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150

Also Read  ಆರ್ಥಿಕ ಜಂಜಾಟದಿಂದ ಪಾರಾಗಿ ಲಕ್ಷ್ಮಿ ಪ್ರಾಪ್ತಿಯಾಗಲು ಹೀಗೆ ಮಾಡಿ.

ಧನಸ್ಸು ರಾಶಿ
ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ಶುಭಕಾರ್ಯಗಳಲ್ಲಿ ಉತ್ತಮವಾದ ಫಲಗಳು ಕಾಣಬಹುದು. ರಾಜಕೀಯ ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗುವುದು ನಿಶ್ಚಿತ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮ ಮಟ್ಟದಲ್ಲಿ ಇರಲಿದೆ. ವ್ಯಾಜ್ಯಗಳು ರಾಜಿ ಸಂಧಾನದ ಮೂಲಕ ಬಗೆಹರಿಯುವುದು. ಕಾರ್ಯದ ನಿಮಿತ್ತ ಅಲೆದಾಟ ಹೆಚ್ಚಳವಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಶಂಸೆ ಸಂಪಾದಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150

ಮಕರ ರಾಶಿ
ಅವಮಾನ ಅಥವಾ ಅಪಮಾನಕರ ಸಮಸ್ಯೆಗಳು ಕಂಡುಬರುತ್ತದೆ. ಕುಡಿಕೆಗಳಲ್ಲಿ ಧನಹಾನಿಯಾಗುವ ಸಾಧ್ಯತೆ ಇದೆ ಎಚ್ಚರ. ನಿಮ್ಮ ಸಾಮಾಜಿಕ ಜೀವನದಲ್ಲಿ ವಿರೋಧಿಗಳು ಹೆಚ್ಚಾಗಿ ಕಂಡುಬರುತ್ತಾರೆ. ಆರೋಗ್ಯದ ಬಗ್ಗೆ ಆದಷ್ಟು ನಿಗಾ ಇರಲಿ. ಮಕ್ಕಳಿಂದ ಬೇಸರದ ವಾತಾವರಣ. ಆತ್ಮೀಯ ವ್ಯಕ್ತಿಗಳು ಮೋಸ ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150

ಕುಂಭ ರಾಶಿ
ಕಾರ್ಯಗಳಲ್ಲಿ ಆತ್ಮೀಯ ಬಂಧುಗಳಿಂದ ವಿರೋಧ ವ್ಯಕ್ತವಾಗುತ್ತದೆ. ವ್ಯವಹಾರಗಳಲ್ಲಿ ಮಂದಗತಿ ಕಾಣಬಹುದು. ಶುಭಕಾರ್ಯಗಳು ಮುಂದೆ ಹೋಗುವ ಸಾಧ್ಯತೆ ಇದೆ. ಶತ್ರುಗಳ ಉಪಟಳ ಹೆಚ್ಚಳವಾಗುತ್ತದೆ. ಮಾಡುವ ಕೆಲಸದಲ್ಲಿ ಸ್ತಾನಪಲ್ಲಟವಾಗುವ ಸಾಧ್ಯತೆಯಿದೆ. ಕುಟುಂಬದ ವಿವಾದಗಳು ತೀವ್ರತರನಾದ ಸ್ವರೂಪ ಪಡೆಯಬಹುದು. ಪ್ರಯಾಣದಿಂದ ಅಸೌಖ್ಯ. ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳು ಬಾಧೆ ನೀಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150

ಮೀನ ರಾಶಿ
ತಮ್ಮ ಕೆಲಸದಲ್ಲಿ ಉತ್ತಮ ನಿರ್ವಹಣೆ ಕಂಡುಬರುವುದು. ಆರ್ಥಿಕ ವ್ಯವಹಾರಗಳು ಲಾಭ ದಿಂದ ಕೂಡಿರುತ್ತದೆ. ಮಕ್ಕಳ ಬೆಳವಣಿಗೆ ಸಂತಸ ತರಲಿದೆ. ವ್ಯವಹಾರಗಳಲ್ಲಿ ಲಾಭದಾಯಕ ಸ್ಥಿತಿ ಕಾಣಬಹುದಾಗಿದೆ. ನವೀನ ಯೋಜನೆಗಳು ಕಾರ್ಯರೂಪಕ್ಕೆ ಕೈಗೊಳ್ಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150

error: Content is protected !!
Scroll to Top