BIG BREAKING NEWS ಮಂಗಳೂರಿನಲ್ಲಿ ಒಂದೇ ದಿನ ನಾಲ್ವರಿಗೆ ಕೊರೋನ ಪಾಸಿಟಿವ್

ಮಂಗಳೂರು, ಮಾ.24: ಮಾಹಮಾರಿ ಕೊರೋನ ಸೋಂಕು ದೇಶದ್ಯಾಂತ ತಲ್ಲಣ ಸೃಷ್ಟಿಸುತ್ತಿದ್ದು, ಮಂಗಳೂರಿನಲ್ಲಿ ಇಂದು ಒಂದೇ ದಿನ ನಾಲ್ವರಿಗೆ ಸೋಂಕು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ನಾಲ್ವರು ಕೇರಳದ ಕಾಸರಗೋಡು ಜಿಲ್ಲೆಯವರು ಎಂದು ತಿಳಿದು ಬಂದಿದೆ. ಈ ಪೈಕಿ ಮೂವರು ದುಬೈಯಿಂದ ಹಾಗೂ ಓರ್ವ ಸೌದಿಯಿಂದ ಬಂದಿದ್ದಾರೆ. ಮಾರ್ಚ್ 20ರಂದು ಮುಂಜಾನೆ 5:30ಕ್ಕೆ ಸ್ಪೈಸ್ ಜೆಟ್ ಮೂಲಕ ಮೂವರು ದುಬೈಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಮೊನ್ನೆ ಕೊರೋನ ಸೋಂಕು ದೃಢಪಟ್ಟ ಭಟ್ಕಳದ ವ್ಯಕ್ತಿಯ ಜೊತೆ ಬಂದಿದ್ದರೆನ್ನಲಾಗಿದೆ. ಓರ್ವ ಸೌದಿಯಿಂದ ಮಂಗಳೂರಿಗೆ ಬಂದಿದ್ದಾರೆ.

Also Read  ಕರಾವಳಿಯಾದ್ಯಂತ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ

ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಒಟ್ಟು ಐವರಿಗೆ ಸೋಂಕು ದೃಢಪಟ್ಟಿದೆ.

 

error: Content is protected !!
Scroll to Top