ಮಾ.31ರವರೆಗೆ ಕರ್ನಾಟಕ ಸಂಪೂರ್ಣ ಲಾಕ್‌ಡೌನ್

ಬೆಂಗಳೂರು, ಮಾ.24: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಾ.31ರವರೆಗೆ ಲಾಕ್‌ಡೌನ್ ಮಾಡಲು ರಾಜ್ಯ ಸರಕಾರ ಆದೇಶಿಸಿದೆ.

ಪ್ರಾರಂಭದಲ್ಲಿ ಕೊರೋನ ಪೀಡಿತ 9 ಜಿಲ್ಲೆಗಳನ್ನು ಮಾತ್ರ ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಬಳಿಕ ಈ ನಿರ್ಧಾರವನ್ನು ಪುನರ್ ಪರಿಶೀಲಿಸಿರುವ ರಾಜ್ಯ ಸರಕಾರ ಇದೀಗ ಮಾರ್ಚ್ 23ರ ಮಧ್ಯರಾತ್ರಿಯಿಂದಲೇ ಈ ಲಾಕ್‌ಡೌನ್ ಆದೇಶವನ್ನು ರಾಜ್ಯಾದ್ಯಂತ ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿದೆ.

ಈ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

Also Read  ಕಲಬುರಗಿ: ಶಾಲಾ ಮಕ್ಕಳ ಪ್ರವಾಸದ ಬಸ್ ಮರಕ್ಕೆ ಢಿಕ್ಕಿ; ಹತ್ತು ವಿದ್ಯಾರ್ಥಿಗಳಿಗೆ ಗಾಯ

error: Content is protected !!
Scroll to Top