BIG BREAKING NEWS ಮಂಗಳೂರಿನಲ್ಲಿ ಪ್ರಥಮ ಕೊರೋನ ವೈರಸ್ ಧೃಢ

ಮಂಗಳೂರು, ಮಾ.22: ರಾಜ್ಯದ್ಯಾಂತ ಭೀತಿ ಸೃಷ್ಟಿಸಿರು ಕೊರೋನ ವೈರಸ್ ಮಂಗಳೂರಿಗೆ ಕಾಲಿಟ್ಟಿದೆ.

ಭಟ್ಕಳ ಮೂಲದ 25ರ ಹರೆಯದ ಯುವಕ ಕೊರೋನ ಸೋಂಕು ಧೃಢಪಟ್ಟ ಬಗ್ಗೆ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ. ಈ ಯುವಕ ಮಾ.19ರಂದು ದುಬೈಯಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅವರನ್ನು ಪರೀಕ್ಷೆಗೊಳಪಡಿಸಿದಾಗ ಶಂಕಿತ ಕೊರೋನ ಪತ್ತೆಯಾಗಿತ್ತು.

ಇಂದು ಅವರ ಪರೀಕ್ಷಾ ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಮೊದಲ ಕೊರೋನ ಪ್ರಕರಣ ಪತ್ತೆಯಾಗಿದೆ.

Also Read  ಭಾರತದಲ್ಲೂ ಕೊರೋನಾ ವೈರಸ್ ಆತಂಕ: ಕೇರಳ 7 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ

error: Content is protected !!
Scroll to Top